ಬೆಂಗಳೂರು : ಪ್ರಗತಿ ಗ್ರಾಫಿಕ್ಸ್ ಮತ್ತು ಶ್ರೀನಿವಾಸ ಪುಸ್ತಕ ಪ್ರಕಾಶನ ಅರ್ಪಿಸುವ ಸಾಹಿತಿ ರಾಜೇಂದ್ರ ಬಿ. ಶೆಟ್ಟಿಯವರ ‘ಅಮ್ಮ ಹಚ್ಚಿದ ದೀಪ’, ‘ಕಥೆಯೊಂದಿಗೆ ಗಣಿತ’ ಮತ್ತು ‘ದೈವಗಳ ನಾಡಿನಲ್ಲಿ’ ಎಂಬ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19-11-2023ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಡಾ. ಸಿ.ಅಶ್ವತ್ಥ್ ಕಲಾ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರಾದ ಶ್ರೀ ಡಿ. ಮಲ್ಲಾರೆಡ್ಡಿ, ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ, ಖ್ಯಾತ ಹಾಸ್ಯಸಾಹಿತಿ ಶ್ರೀ ಎಚ್. ಡುಂಡಿರಾಜ್, ಕೆಎಸ್ಎಂ ಸ್ಮಾರಕ ಟ್ರಸ್ಟಿನ ಸಂಸ್ಥಾಪಕರಾದ ಡಾ.ಎಂ. ಬೈರೇಗೌಡ, ಅಂಕಣಕಾರರಾದ ಶ್ರೀ ಎನ್. ರಾಮನಾಥ್, ಕಟ್ಟೆಸತ್ಯ ಫೌಂಡೇಷನ್ ಮತ್ತು ಸತ್ತ್ವಶಾಲೆಯ ಸಂಸ್ಥಾಪಕರಾದ ಶ್ರೀ ಎಸ್. ಸುಜಯ್ ಮತ್ತು ನಿರೂಪಕರು, ಸಾಹಿತಿ, ಕಂಠದಾನ ಕಲಾವಿದರಾದ ಶ್ರೀ ಜಿ.ಪಿ. ರಾಮಣ್ಣ ಇವರುಗಳು ಭಾಗವಹಿಸಲಿರುವರು.
1 Comment
ಅಭಿನಂದನೆಗಳು💐