ಉಡುಪಿ : ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಳೆಗಾಲದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 03 ಆಗಸ್ಟ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಪ್ರಸಂಗಕರ್ತರಾದ ಎಂ.ಕೆ. ರಮೇಶ ಆಚಾರ್ಯರ ಕಲಾಕುಂಚದಲ್ಲಿ ಮೂಡಿಬಂದ ಕಥಾನಕ ‘ತಿಂತಿಣಿ ಮೌನೇಶ್ವರ’ ಪ್ರಸಂಗವು ಮೌನೇಶ ಆಚಾರ್ಯ ಪರ್ಕಳ ಇವರ ಕಥಾ ಸಂಯೋಜನೆಯಲ್ಲಿ ಮೂಡಿ ಬರಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಕೆ.ಜೆ. ಗಣೇಶ ಆಚಾರ್ಯ, ಮದ್ದಲೆಯಲ್ಲಿ ಶಶಾಂಕ ಆಚಾರ್ಯ ಮತ್ತು ಕೆ.ಜೆ. ಸುಧೀಂದ್ರ ಆಚಾರ್ಯ ಹಾಗೂ ಚಂಡೆಯಲ್ಲಿ ಕೆ.ಜೆ. ಕೃಷ್ಣ ಆಚಾರ್ಯ, ದೀಪ್ತ ಆಚಾರ್ಯ ಮತ್ತು ಪ್ರಣೀತ ಆಚಾರ್ಯ ಇವರುಗಳು ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಶಶಿಕಾಂತ ಶೆಟ್ಟಿ ಕಾರ್ಕಳ, ಸುಧೀರ್ ಉಪ್ಪೂರು, ಶಂಕರ ದೇವಾಡಿಗ ಉಳ್ಳೂರು, ಆನಂದ ರಾವ್ ಉಪ್ಪಿನಕುದ್ರು, ಸೀತಾರಾಮ ಕುಮಾರ್ ಕಟೀಲು, ಪ್ರಜ್ವಲ್ ಗುರುವಾಯನಕೆರೆ, ವಾಸುದೇವ ರಂಗ ಭಟ್ ಮಧೂರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಈಶ್ವರ ನಾಯ್ಕ್ ಮಂಕಿ, ಸುಬ್ರಹ್ಮಣ್ಯ ಗಾಣಿಗ ಕೋಣೆ, ಗುರುಪ್ರಸಾದ ಸರಳಾಯ, ಅರವಿಂದ ಆಚಾರ್ಯ ಮತ್ತು ಪ್ರಥ್ವೀಶ್ ಪರ್ಕಳ ಇವರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಪ್ರಸಂಗಕರ್ತರಾದ ಎಂ.ಕೆ. ರಮೇಶ ಆಚಾರ್ಯ, ಕಾಷ್ಠ ಶಿಲ್ಪಿ ಕೃಷ್ಣಯ್ಯ ಆಚಾರ್ಯ ಮತ್ತು ಶ್ರೀಮತಿ ಶ್ಯಾಮಲ ವಿ. ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಗುವುದು.