ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಸಂಜೆ 4-00 ಗಂಟೆಗೆ ಅನುವಾದ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಇವರು ಉದ್ಘಾಟನೆ ಮಾಡಲಿದ್ದು, ಪ್ರಾಧ್ಯಾಪಕರು ಹಾಗೂ ಅನುವಾದಕರಾದ ಪ್ರೊ. ಷಾಕಿರ ಖಾನುಂ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. 7-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಂ.ಆರ್. ಕಮಲ ಇವರಿಗೆ 2025ನೇ ಸಾಲಿನ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪ್ರದಾನ ನಡೆಯಲಿದೆ.

