ಬೆಂಗಳೂರು : ಯಕ್ಷದೇಗುಲ (ರಿ.) ಬೆಂಗಳೂರು ಇವರ ಸಂಯೋಜನೆಯಲ್ಲಿ ‘ಯಕ್ಷದೇಗುಲ ಸನ್ಮಾನ – 2025’ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 25 ಡಿಸೆಂಬರ್ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಬಸವನಗುಡಿ ಎನ್.ಆರ್. ಕಾಲನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಗುಂಡ್ಮಿ ಸದಾನಂದ ಐತಾಳ್ ಇವರಿಗೆ ‘ಯಕ್ಷದೇಗುಲ 2025’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಕೆ. ಮೋಹನ್ ಮತ್ತು ಪ್ರಿಯಾಂಕ ಕೆ. ಮೋಹನ್ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳುವ ‘ಏಕಲವ್ಯ’ ಮತ್ತು ‘ರತ್ನಾವತಿ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನದಲ್ಲಿ 70 ಮಕ್ಕಳ ಯಕ್ಷರಂಗ ಪ್ರವೇಶ ನಡೆಯಲಿದೆ. ಹಿಮ್ಮೇಳದಲ್ಲಿ ಲಂಬೋದರ ಹೆಗಡೆ ನಿಟ್ಟೂರು ಮತ್ತು ಪ್ರಸನ್ನ ಭಟ್ ಇವರು ಭಾಗವತರು ಹಾಗೂ ಸಂಪತ್ ಕುಮಾರ್ ಮದ್ದಲೆ ಹಾಗೂ ಸುದೀಪ ಉರಾಳ ಚೆಂಡೆಯಲ್ಲಿ ಸಹಕರಿಸಲಿದ್ದಾರೆ.

