ಕಾಸರಗೋಡು: ಗಡಿನಾಡಿನ ತುಳು, ಕನ್ನಡ ರಂಗ ಭೂಮಿಗೆ ಮಹತ್ವದ ಕೊಡುಗೆ ನೀಡಿದ ರಂಗನಿರ್ದೇಶಕ, ನಟ, ನಾಟಕಕಾರ ಚಟ್ಲ ರಾಮಯ್ಯ ಶೆಟ್ಟಿ ಇವರಿಗೆ ಅಭಿನಂದನಾ ಸಮಾರಂಭ ರಾಮಯ್ಯ ಶೆಟ್ಟಿ ಅವರ ನಿವಾಸದಲ್ಲಿ ದಿನಾಂಕ 04 ಡಿಸೆಂಬರ್ 2024ರಂದು ನಡೆಯಿತು.
ಕಾಸರಗೋಡಿನ ಸಾಂಸ್ಕಂತಿಕ, ಸಾಹಿತ್ಯಿಕ ಸಂಸ್ಥೆಯಾದ ರಂಗ ಚಿನ್ನಾರಿ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡದ ರಂಗ ಚಿನ್ನಾರಿ ಇದರ ನಿರ್ದೇಶಕ ಹಾಗೂ ಚಿತ್ರನಟ ಕಾಸರಗೋಡು ಚಿನ್ನಾ “ಚಟ್ಲ ರಾಮಯ್ಯ ಶೆಟ್ಟಿ ಇವರು 1970-80ರ ದಶಕದಲ್ಲಿ ಕಾಸರಗೋಡಿನ ರಂಗ ಭೂಮಿಯಲ್ಲಿ ನಾಟಕ ಕಲಾವಿದನಾಗಿ, ನಿರ್ದೇಶಕನಾಗಿ, ನಾಟಕ ರಚನಾಕಾರನಾಗಿ ಖ್ಯಾತಿ ಗಳಿಸಿದವರು.” ಜತೆಗೆ ಸಾಮಾಜಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವವರು.”
ರಾಮಯ್ಯ ಶೆಟ್ಟಿ ಇವರನ್ನು ಶಾಲು ಹೊದಿಸಿ, ಸ್ಮರಣಿಕ, ಫಲಪುಷ್ಪ ನೀಡಿ ಕಾಸರಗೋಡು ಚಿನ್ನಾ ಗೌರವಿಸಿದರು. ರಂಗಚಿನ್ನಾರಿ ನಿರ್ದೇಶಕರಾದ ಸತೀಶ್ಚಂದ್ರ ಭಂಡಾರಿ ಕೋಳಾರು, ರಂಗ ನಟ ದೂಮಣ್ಣ ರೈ, ಮಹಾಬಲ ರೈ, ಲೋಕೇಶ್, ಸಂಜು ಕಾಸರಗೋಡು, ಕೆ. ಸತ್ಯನಾರಾಯಣ, ಸಂಕಪ್ಪ ರಐ, ವಿದ್ಯಾ, ಲೀಲಾವತೀ, ಅಮರನಾಥ ಶೆಟ್ಟಿ, ಸುಧಾಕರ ಭಂಡಾರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಬ್ರಹ್ಮ ಬೈದರ್ಕಳ ಗರಡಿ ಸಭಾಭವನದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ