ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ‘ತ್ರಿದಶ ನಾಟ್ಯ ಕಲೋತ್ಸವ’ ಕಾರ್ಯಕ್ರಮವನ್ನು ದಿನಾಂಕ 05 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ಪರ್ಶ ಕಲಾ ತಂಡದ ನವರಸ ಕಲಾವಿದರು ಸುರತ್ಕಲ್ ಇವರಿಂದ ವಿನೋದ್ ಶೆಟ್ಟಿ ಕೃಷ್ಣಾಪುರ ಇವರ ನಿರ್ದೇಶನದಲ್ಲಿ ‘ಎನ್ನಂದಿನ’ ತುಳು ಕುತೂಹಲಕಾರಿ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಕಲಾಗುರ್ಕಾರೆ ರಮೇಶ್ ಭಟ್ ಎಸ್.ಜಿ. ನಿರ್ಮಾಣ, ಅರುಣ್ ವಿ. ಸುರತ್ಕಲ್ ಸಮಗ್ರ ನಿರ್ವಹಣೆ, ತುಳುವ ಬೊಲ್ಪು ಸಂದೀಪ್ ಮಧ್ಯ ಸಂಗೀತ ಸಾಹಿತ್ಯ ಸಂಭಾಷಣೆ, ಅವಿನಾಶ್ ಎಸ್. ಆಪ್ತ ಕಥೆ ಸಂಭಾಷಣೆ, ಎಸ್.ಎಸ್. ಮ್ಯೂಜಿಕ್ ಹಳೆಯಂಗಡಿ ಧ್ವನಿ ಬೆಳಕು, ರಾಜೇಶ್ ಹಾಗೂ ವಿಪಿನ ಆರ್ಟ್ಸ್ ರಂಗ ವಿನ್ಯಾಸ ನೀಡಿರುತ್ತಾರೆ.