ಮಂಗಳೂರು : ಹವ್ಯಾಸಿ ಬಳಗ ಕದ್ರಿ (ರಿ.) ಮಂಗಳೂರು ಇದರ ತ್ರಿಂಶತಿ ಸಂಭ್ರಮ ಸಮಾರಂಭವನ್ನು ದಿನಾಂಕ 05 ಜನವರಿ 2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ, ಕೀರ್ತಿಶೇಷ ಕಲಾವಿದರ ಸಂಸ್ಮರಣೆ, ಯಕ್ಷ ಸುವಾಸಿನಿ ಪುರಸ್ಕಾರ, ಯಕ್ಷ ಪ್ರಶಸ್ತಿ ಪ್ರದಾನ – ಯಕ್ಷ ಸಂಮಾನ, ಯಕ್ಷ ಗೌರವಾಭಿನಂದನೆ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಾಯಂಕಾಲ 4-00 ಗಂಟೆಗೆ ಪ್ರಸಿದ್ಧ ಅರ್ಥಧಾರಿಗಳಿಂದ ‘ಶರಣಸುತ ತರಣಿಸೇನ’ ಯಕ್ಷಗಾನ ತಾಳಮದ್ದಳೆ, 6-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಯಂ.ಯಂ.ಸಿ. ರೈ ಯವರಿಗೆ ನುಡಿನಮನ, ಕೀರ್ತಿಶೇಷ ಕಲಾವಿದರ ಸಂಸ್ಮರಣೆ, ಯಕ್ಷ ಸುವಾಸಿನಿ ಪುರಸ್ಕಾರ, ಹಿರಿಯ ವಿಶ್ರಾಂತ ಕಲಾವಿದರಿಗೆ ‘ಯಕ್ಷ ಪ್ರಶಸ್ತಿ’ ಪ್ರದಾನ, ಯಕ್ಷಾ ಸಾಧಕರಿಗೆ ‘ಯಕ್ಷ ಸಂಮಾನ’ ಮತ್ತು ಯಕ್ಷ ಗೌರವಾಭಿನಂದನೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ರಾಜಾ ದಂಡಕ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.