11 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ ತುಳು ಹರಿಕಥೆ ಉಚ್ಚಯ-2023ರ ನಾಲ್ಕನೇ ದಿನದ ಉದ್ಘಾಟನೆಯನ್ನು ದೇರಳಕಟ್ಟೆಯ ಹೋಟೆಲ್ ದಿ ಕಂಫರ್ಟ್ ಇನ್ ಇದರ ಮಾಲಕರಾದ ಲ| ಚಂದ್ರಹಾಸ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವೇದಿಕೆಯಲ್ಲಿ ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕಾನಂದ ಸನಿಲ್ ಟ್ರಸ್ಟ್ ನ ಕೋಶಾಧಿಕಾರಿ ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ತುಳುವ ಸಿರಿ ಟ್ರಸ್ಟ್ ನ ಗೌರವ ಸಲಹೆಗಾರರಾದ ಶ್ರೀ ಕೆ. ರವೀಂದ್ರ ರೈ ಕಲ್ಲಿಮಾರ್ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ ಟ್ರಸ್ಟ್ ನ ಸಂಚಾಲಕರಾದ ಸತೀಶ್ ದೀಪಂ, ಅನಂತ ಕೃಷ್ಣ ಯಾದವ್, ಸುರೇಶ್ ಶೆಟ್ಟಿ ಅಂಬ್ಲಮೊಗರು, ಸಂಜೀವ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಬಳಿಕ ಹರಿದಾಸರಾದ ಶ್ರೀಮತಿ ಮಂಜುಳಾ ಇರಾ ಇವರಿಂದ “ಗೋರ ಕುಂಬಾರೆ” ಎಂಬ ಕಥಾ ಕೀರ್ತನೆ ನಡೆಯಿತು. ಇವರಿಗೆ ಸಹಕರಿಸಿದವರು ತಬ್ಲಾದಲ್ಲಿ ಶ್ರೀ ಪ್ರಕಾಶ್ ಆಪ್ರೆ ಮತ್ತು ಮಾಸ್ಟರ್ ಹೃಷಿಕೇಶ್ ಹಾಗೂ ಹಾರ್ಮೋನಿಯಂ ಶ್ರೀ ರಮೇಶ್ ಹೆಬ್ಬಾರ್.