ಮೂಡಬಿದಿರೆ : ತುಳುವ ಮಹಾಸಭೆ ಮೂಡಬಿದಿರೆ ತಾಲೂಕು, ಮಂದಾರ ಪ್ರತಿಷ್ಠಾನ ಮಂಗಳೂರು, ತುಳುಕೂಟ ಬೆದ್ರ ಮತ್ತು ಧವಳತ್ರಯ ಟ್ರಸ್ಟ್ ಮೂಡಬಿದಿರೆ ಇವರ ಜಂಟಿ ಆಶ್ರಯದಲ್ಲಿ ‘ತುಳು ಕಾವ್ಯ ಯಾನ 28’ ಕಾರ್ಯಕ್ರಮವನ್ನು ದಿನಾಂಕ 24 ಆಗಸ್ಟ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಮೂಡಬಿದಿರೆಯ ಜೈನ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ತುಳು ವಾಲ್ಮೀಕಿ ಮಂದಾರ ಕೇಶವ ಬಟ್ರ್ ರಚಿಸಿರುವ ‘ಬೀರದ ಬೊಲ್ಪು’ ಬಾಲ ಕೃಷ್ಣನ ಬಾಲಲೀಲೆ ಪ್ರಸ್ತುತಗೊಳ್ಳಲಿದೆ.