Subscribe to Updates

    Get the latest creative news from FooBar about art, design and business.

    What's Hot

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬಂಗಾರ್ ಪರ್ಬ ಸರಣಿ ವೈಭವದಲ್ಲಿ ‘ತುಳು ನಾಡಿನ ಪಾರಂಪರಿಕ ವಾದ್ಯ ವಾದನಗಳ ಸ್ಪರ್ಧೆ’
    Competition

    ಬಂಗಾರ್ ಪರ್ಬ ಸರಣಿ ವೈಭವದಲ್ಲಿ ‘ತುಳು ನಾಡಿನ ಪಾರಂಪರಿಕ ವಾದ್ಯ ವಾದನಗಳ ಸ್ಪರ್ಧೆ’

    January 5, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕುಡ್ಲದ ತುಳು ಕೂಟ ಸಂಸ್ಥೆಯ ಬಂಗಾರ್ ಪರ್ಬ ಸರಣಿ ವೈಭವ 10 ಸಮಾರೋಪ ಸಮಾರಂಭದಲ್ಲಿ ‘ತುಳು ನಾಡಿನ ಪಾರಂಪರಿಕ ವಾದ್ಯ ವಾದನಗಳ ಸ್ಪರ್ಧೆ’ಯು ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 30-12-2023ರಂದು ನಡೆಯಿತು.

    ಈ ಕಾರ್ಯಕ್ರಮವನ್ನು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ದಯಾಕರ ಕುಳಾಯಿಯವರು ದೀಪ ಬೆಳಗಿಸಿ ಉದ್ಧಾಟಿಸಿ “ನಮ್ಮ ತುಳು ವೈವಿಧ್ಯತೆಯಲ್ಲೂ ಭಾಷಾ ಸೊಬಗನ್ನು ಪಡೆದಿದೆ. ನಾವು ಪಟ್ಟು ಹಿಡಿದು ಅದನ್ನು ಆಗ್ರಹಪೂರ್ವಕವಾಗಿ ಉಳಿಸಿ-ಬೆಳೆಸುವಲ್ಲಿ ಹಿಂದುಳಿಯಬಾರದು ತುಳುವಿನ ಉಳಿವು – ಅಳಿವಿನ ಪ್ರಶ್ನೆಗೆ ನಾವೇ ಬಾಧ್ಯಸ್ಥರು” ಎಂದು ಸಂಸ್ಥೆಗೆ ಶುಭ ಹಾರೈಸಿದರು.

    ಮುಖ್ಯ ಅತಿಥಿಯಾಗಿ ಬಂದ ಮಾಜಿ ಸೈನಿಕರ ಅಸೋಸಿಯೇಶನ್ ನ ಅಧ್ಯಕ್ಷರಾದ ಬಾಳ ಶ್ರೀ ಶ್ರೀಕಾಂತ ಶೆಟ್ಟಿಯವರು “ಈಗೀಗ ತುಳುವಿನ ಅನೇಕ ಶಬ್ದಗಳು ಕನ್ನಡೀಕರಣವಾಗಿ ತುಳುವಿನ ಮೂಲ ಅಸ್ತಿತ್ವ ಅಳಿಸಿ ಹೋಗಿ ನಮ್ಮ ಮುಂದಿನ ಪೀಳಿಗೆ ಭಾಷಾ ಗೊಂದಲದಲ್ಲಿ ಬಳಲುವಂತಾಗುತ್ತದೆ. ಅದಕ್ಕಾಗಿ ತುಳು ಕೂಟ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ದಾರಿದೀಪಗಳಾಗುತ್ತವೆ. ಐವತ್ತು ವರ್ಷಗಳ ಅವರ ಹೋರಾಟಕ್ಕೆ ತಕ್ಕ ಫಲ ಸಿಗಲಿ. ನಾವೆಲ್ಲಾ ನೈಜ ತುಳುವರಾಗೋಣ
    ಎಂದರು.

    ತುಳು ಕೂಟದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗರು ಅಧ್ಯಕ್ಷೀಯ ಪೀಠದಿಂದ “ತುಳು ಭಾಷೆ ನಮ್ಮ ಹಕ್ಕಿನದ್ದು ಅದನ್ನು ಬಳಸಿ ಬೆಳೆಸುವುದು ಮುಂದಿನ ಜನಾಂಗದವರ ಹೊಣೆ. ಹೆಚ್ಚು ಹೆಚ್ಚು ಅನ್ಯಭಾಷೀಯ ಶಬ್ದಗಳು ಇದರೊಂದಿಗೆ ಬೆರೆತರೆ ಮೂಲ ಭಾಷೆ ಮೂಲೆ ಸೇರುತ್ತದೆ. ಈ ಅಪಾಯವನ್ನು ಗಮನಿಸಿ, ತುಳು ಕೂಟ ನಡೆಸುವ ಈ ಭಾಷಾ ಉಳಿವಿನ ಕಾರ್ಯಕ್ಕೆ ಬೆಂಬಲ ನೀಡಿ. ಹತ್ತು ಹಲವು ಕೈಗಳ ಒಗ್ಗೂಡುವಿಕೆಯಿಂದ ತುಳು ಎರಡನೇ ಪರಿಚ್ಛೇದಕ್ಕೆ ಸೇರುವಲ್ಲಿ ಶಂಕೆಯೇ ಇರದು” ಎಂದು ಕರೆ ನೀಡಿದರು.

    ಬ್ರಹ್ಮಶ್ರೀ ನಾರಾಯಣ ಗುರು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಉಮೇಶ ಕರ್ಕೇರರು ಪಾರಂಪರಿಕ ತುಳು ಜೀವನದ ಅನೇಕ ವಸ್ತುಗಳ ತೂಪರಿಕೆ (ಪ್ರದರ್ಶನ)ಯನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿಯರಾದ ಕು. ಪುಷ್ಪಲತಾ, ಗುಣವತಿ ಹಾಗೂ ಇನ್ನೋರ್ವ ಮುಖ್ಯೋಪಾಧ್ಯಾಯ ಮಹಾವೀರ ಜೈನ್ ಅತಿಥಿಗಳಾಗಿದ್ದರು. ತುಳು ಕೂಟದ ಖಚಾಂಚಿ ಶ್ರೀ ಚಂದ್ರಶೇಖರ ಸುವರ್ಣರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ರೊ. ಜೆ.ವಿ.ಶೆಟ್ಟಿ ಧನ್ಯವಾದವಿತ್ತರು. ಶ್ರೀ ಸತೀಶ್ ಸುರತ್ಕಲ್ ಹಾಗೂ ವಿಜಯಲಕ್ಷೀ ಯಲ್.ಎನ್. ತೀರ್ಪುಗಾರರಾಗಿ ಸಹಕರಿಸಿದರು. ಹೇಮಾ ನಿಸರ್ಗ ಹಾಗೂ ಪ್ರದಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರ್ವಹಿಸಿದರು.

    ಸದಸ್ಯರಾದ ಸತ್ಯವತಿ ಆರ್. ಬೋಳೂರು, ರಮೇಶ್ ಕುಲಾಲ್ ಬಾಯಾರು, ವಿಶ್ವನಾಥ ಪೂಜಾರಿ ಸೋಣಳಿಕೆ ಸ್ಪರ್ಧೆಗಳನ್ನು ನಡೆಸಲು ಪೂರಕರಾದರು. ವಿದ್ಯಾರ್ಥಿನಿಯರಾದ ಶ್ರೇಯಾ, ಪಲ್ಲವಿ ಪ್ರಾರ್ಥನೆ ಹಾಡಿದರು. ಶಾಲಾ ಅಧ್ಯಾಪಕರು, ಅಧ್ಯಾಪಿಕೆಯರು, ಉಪನ್ಯಾಸಕ – ಉಪನ್ಯಾಸಕಿ ಬಳಗ ಸ್ಪರ್ಧೆಗಾಗಿ ಕೈ ಜೋಡಿಸಿದ್ದರು. ಬಳಿಕ ಸಮಾರೋಪ ಸಮಾರಂಭದಲ್ಲಿ ತುಳುವರ ಪಾರಂಪರಿಕ ವಾದ್ಯವಾದನಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ತುಳುಕೂಟದ ವತಿಯಿಂದ ಬಹುಮಾನ ವಿತರಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ವಿವಿಯಲ್ಲಿ ಯಕ್ಷ ನಾಟ್ಯ ತರಬೇತಿಯ ಉದ್ಘಾಟನೆ
    Next Article ಖ್ಯಾತ ಸಾಹಿತಿ ಪ್ರೋ. ಅಮೃತ ಸೋಮೇಶ್ವರ ನಿಧನ
    roovari

    Add Comment Cancel Reply


    Related Posts

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’ ಕಾರ್ಯಕ್ರಮ | ಜೂನ್ 08

    June 3, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಸ್ಪರ್ಧೆ- ಆಳ್ವಾಸ್ ಧೀಂಕಿಟ ಕೇಂದ್ರ ಪ್ರಥಮ

    June 3, 2025

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08

    June 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.