ಬಂಟ್ವಾಳ : ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಾದರ ಪಡಿಸುವ ತೆಂಕುತಿಟ್ಟಿನ ಸುಪ್ರಸಿದ್ಧ 50ಕ್ಕೂ ಮಿಕ್ಕಿ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿ ಯಕ್ಷಗಾನ ಬಯಲಾಟವನ್ನು ದಿನಾಂಕ 10 ನವೆಂಬರ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಬಂಟ್ವಾಳ ತಾಲೂಕಿನ ಬಿ.ಸಿ. ರೋಡಿನ ಸ್ಪರ್ಷ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೇ ಮತ್ತು ಕುಲದೈವೋ ಬ್ರಹ್ಮ ಖ್ಯಾತಿಯ ಪ್ರಸಂಗಕರ್ತ ಶ್ರೀ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ ನಿರ್ದೇಶಿಸಿದ ಆದಿದ್ರಾವಿಡ ಸಮಾಜದ ಹಿರಿಮೆಯನ್ನು ಸಾರುವ ಪುಣ್ಯ ಐತಿಹಾಸಿಕ ತುಳು ಪ್ರಸಂಗ ‘ತುಲುನಾಡ ಸತ್ಯೊಲು ಕಾನದ ಕಟದೆರ್’ ಎಂಬ ನೂತನ ಪ್ರಸಂಗ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನ. ಶ್ರೀ ಯೋಗೀಶ್ ರಾವ್ ಚಿಗುರುಪಾದೆ ರಚಿಸಿದ ಈ ಪ್ರಸಂಗದ ಹಾಡುಗಳನ್ನು, ತೆಂಕು ತಿಟ್ಟಿನ ಸುಪ್ರಸಿದ್ದ 5 ಜನ ಭಾಗವತರು ದ್ವಂದ್ವ ಭಾಗವತಿಕೆಯಲ್ಲಿ ಹಾಡಲಿದ್ದಾರೆ.