ಕುಳಾಯಿ : ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾಸಿಕ ಹುಣ್ಣಿಮೆಯ ಪ್ರಯುಕ್ತ ‘ತುಳುನಾಡ ಬಲಿಯೇಂದ್ರ’ ಎಂಬ ತುಳು ಯಕ್ಷಗಾನ ತಾಳಮದ್ದಳೆ ದಿನಾಂಕ 28-10-2023ರಂದು ಕುಳಾಯಿ ಶ್ರೀ ವಿಷ್ಣುಮೂತಿ೯ ಕೃಪಾಶ್ರಿತ ಸಂಚಾರಿ ತಿರುಗಾಟದ ಚಿಕ್ಕ ಮೇಳದ ಪ್ರಾಯೋಜಕತ್ವದಲ್ಲಿ ಜರಗಿತು.
ಹಿಮ್ಮೇಳದಲ್ಲಿ ಬೋಂದೇಲ್ ಸತೀಶ್ ಶೆಟ್ಟಿ, ಅಡೂರು ಆನಂದ, ಮೋಹನ್ ಶೆಟ್ಟಿಗಾರ್, ಜಗದೀಶ್ ಶೆಟ್ಟಿಗಾರ್, ಭರತ್ ಶೆಟ್ಟಿಗಾರ್ ಮತ್ತು ಜನಾರ್ದನ ಖಾರ್ವಿ ಹಾಗೂ ಮುಮ್ಮೇಳದಲ್ಲಿ ಬಲಿ ಚಕ್ರವರ್ತಿ (2)- ಜಬ್ಬಾರ್ ಸಮೋ ಸಂಪಾಜೆ, ವಾಮನ – ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಶುಕ್ರಾಚಾರ್ಯರು – ವಾದಿರಾಜ ಕಲ್ಲೂರಾಯ, ಕಲಿಪುರುಷ – ಕೃಷ್ಣ ಪ್ರಸಾದ್ ಕಾಟಿಪಳ್ಳ, ಬಲಿ ಚಕ್ರವರ್ತಿ (1) – ರವಿ ಮುಂಡಾಜೆ, ವಿಂದ್ಯಾವಳಿ – ರಾಜೇಶ್ ಬೆಳ್ಳಾರೆ ಸಹಕರಿಸಿದರು.
ಕುಳಾಯಿ ಚಿಕ್ಕ ಮೇಳದ ಸಂಚಾಲಕರಾದ ಜನಾರ್ದನ ಖಾರ್ವಿ ಮತ್ತು ಭರತ್ ಶೆಟ್ಟಿಗಾರ್ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶಾಲು ಹಾಕಿ ಗೌರವಿಸಿದರೆ, ಬಾಯಾರು ಎಸ್.ಎನ್. ಭಟ್ ಕಾರ್ಯಕ್ರಮದ ಸ್ವಾಗತ ಭಾಷಣ ಮತ್ತು ಪಾತ್ರ ಪರಿಚಯ ಮಾಡಿದರು. ಶ್ರೀ ದೇವಳದ ಆಡಳಿತ ಮಂಡಳಿ ಮತ್ತು ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಸರ್ವ ಸದಸ್ಯ ಹಾಗೂ ಶ್ರೀ ದೇವಳದ ಮೇಲಾಧಿಕಾರಿಯಾದ ರಾಘವೇಂದ್ರ ಹೆಬ್ಬಾರ್ ಇವರ ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.
1 Comment
ಉತ್ತಮ ವರದಿ. ಶುಭಾಶಯಗಳು