Subscribe to Updates

    Get the latest creative news from FooBar about art, design and business.

    What's Hot

    ಸಂಗೀತ ವಿಮರ್ಶೆ | ಶ್ರೋತೃಗಳನ್ನು ಸೆಳೆದ ಸಾಯಿ ವಿಘ್ನೇಶ್ ಹಾಡುಗಾರಿಕೆ

    February 13, 2026

    ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಇವರಿಗೆ ‘ಬೊಂಡಾಲ ಪ್ರಶಸ್ತಿ’ ಪ್ರದಾನ | ಫೆಬ್ರವರಿ 19 ಮತ್ತು 20

    February 13, 2026

    ಸಂಗೀತ ಪರಿಷತ್ತಿನಿಂದ ‘ನಾದಾಲಯ’ ಗೃಹ ಸಂಗೀತ ಕಛೇರಿ | ಫೆಬ್ರವರಿ 14

    February 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಚ್ಚೇರಿಪೇಟೆಯಲ್ಲಿ ‘ತುಳುನಾಡಿನ ಬೆರ್ಮೆ‌ರು’ ಕೃತಿ ಬಿಡುಗಡೆ ಮತ್ತು ಮಾತುಕತೆ | ಫೆಬ್ರವರಿ 15
    Book Release

    ಸಚ್ಚೇರಿಪೇಟೆಯಲ್ಲಿ ‘ತುಳುನಾಡಿನ ಬೆರ್ಮೆ‌ರು’ ಕೃತಿ ಬಿಡುಗಡೆ ಮತ್ತು ಮಾತುಕತೆ | ಫೆಬ್ರವರಿ 15

    February 13, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಬರೆದ ‘ತುಳುನಾಡಿನ ಬೆರ್ಮರು’ ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 15 ಫೆಬ್ರವರಿ 2026ರಂದು ಸಂಜೆ ಗಂಟೆ 3-45ಕ್ಕೆ ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ನಡೆಯಲಿದೆ. ಕೆ.ಎಲ್. ಕುಂಡಂತಾಯ, ಪೊಸ್ರಾಲು ರಾಘವೇಂದ್ರ ಭಟ್ ಪೊಸ್ರಾಲು, ಜಗದೀಶ ಶೆಟ್ಟಿ ನಡಿಗುತ್ತು, ಕೆ. ಸತ್ಯಶಂಕರ ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.

    ತುಳುನಾಡಿನ ಪ್ರಧಾನ ಆರಾಧ್ಯ ದೈವವಾದ ಬೆರ್ಮೆರ್ ಎಂದರೆ ಯಾರು ಎನ್ನುವ ವಿಚಾರ ವಿದ್ವಾಂಸರಿಂದ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲ್ಪಡುತ್ತಿದೆ. ಬೆರ್ಮೆರ ಯಾರು ಎಂಬ ಚರ್ಚೆಗೆ ಹೊಸ ದಿಕ್ಕನ್ನು ತೋರಿಸಿದ ಡಾ. ಬಿ. ಜನಾರ್ದನ ಭಟ್ಟರು ಎರಡು ಬಗೆಯ ಬೆರ್ಮರನ್ನು ಗುರುತಿಸಿದ್ದಾರೆ. ಶಾಲಿವಾಹನನು ತುಳುನಾಡಿನ ಸಾತವಾಹನ ಅರಸನೆಂಬ ಗೋವಿಂದ ಪೈಗಳ ಸೂಚನೆಯನ್ನು ವಿಸ್ತರಿಸಿ ಶಾಸ್ತಾವು ಅಥವಾ ಶಾಸ್ತಾರನೆ ಭೂತ ಬ್ರಹ್ಮ ಎಂಬ ವಾದವನ್ನು ಹೊಸದಾಗಿ ಮಂಡಿಸಿದ್ದಾರೆ. ಜೈನ ಬ್ರಹ್ಮನ ಆರಾಧನೆ ಸೇರಿಕೊಂಡು ಸಂಕೀರ್ಣವಾಗಿ ಬೆಳೆದ ಈ ನಾಡಿನ ದೈವಾರಾಧನೆಯಲ್ಲಿ ಬೆರ್ಮೆರೆಂದರೆ ದೇವರೆಂಬ ಅರ್ಥದಲ್ಲಿ ಕುಲಮೂಲದ ವೀರಪುರುಷರನ್ನೂ ಬೆರ್ಮರಾಗಿ ಆರಾಧಿಸುವುದನ್ನೂ ಅವರು ಈ ಕೃತಿಯಲ್ಲಿ ಗುರುತಿಸಿದ್ದಾರೆ. ವೀರಪುರುಷರನ್ನೂ ಬೆರ್ಮರಾಗಿ ಆರಾಧಿಸುವುದನ್ನು ಅವರು ಗುರುತಿಸಿದ್ದಾರೆ. ಪುಸ್ತಕ ಬಿಡುಗಡೆಯ ಜೊತೆಗೆ ಸಂವಾದವೂ ನಡೆಯಲಿದೆ ಎಂದು ಕ.ಸಾ.ಪ. ಮೂಲ್ಕಿ ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.

     

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಸಂಘಟಕ, ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆಗೆ ‘ಕವಿಕಾವ್ಯ ವಿಭೂಷಣ ಪ್ರಶಸ್ತಿ’
    Next Article ಸಂಗೀತ ಪರಿಷತ್ತಿನಿಂದ ‘ನಾದಾಲಯ’ ಗೃಹ ಸಂಗೀತ ಕಛೇರಿ | ಫೆಬ್ರವರಿ 14
    roovari

    Add Comment Cancel Reply


    Related Posts

    ಸಂಗೀತ ವಿಮರ್ಶೆ | ಶ್ರೋತೃಗಳನ್ನು ಸೆಳೆದ ಸಾಯಿ ವಿಘ್ನೇಶ್ ಹಾಡುಗಾರಿಕೆ

    February 13, 2026

    ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಇವರಿಗೆ ‘ಬೊಂಡಾಲ ಪ್ರಶಸ್ತಿ’ ಪ್ರದಾನ | ಫೆಬ್ರವರಿ 19 ಮತ್ತು 20

    February 13, 2026

    ಸಂಗೀತ ಪರಿಷತ್ತಿನಿಂದ ‘ನಾದಾಲಯ’ ಗೃಹ ಸಂಗೀತ ಕಛೇರಿ | ಫೆಬ್ರವರಿ 14

    February 13, 2026

    ಸಂಘಟಕ, ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆಗೆ ‘ಕವಿಕಾವ್ಯ ವಿಭೂಷಣ ಪ್ರಶಸ್ತಿ’

    February 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.