ಉಪ್ಪಳ : ತುಲುವೆರೆ ಕಲ ಸಂಘಟನೆ ವತಿಯಿಂದ ದಿನಾಂಕ 01 ಜೂನ್ 2025ರಂದು ಬೆಳಗ್ಗೆ 9-30 ಗಂಟೆಗೆ ಉಪ್ಪಳ ಕೊಂಡೆವೂರು ಮಠದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ‘ತುಲುವೆರೆ ಕಲ ವರ್ಸೋಚ್ಚಯ’ ನಡೆಯಲಿದೆ.
ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಅ.ಭಾ.ಸಾ.ಪ. ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮಂಗಳೂರು ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಸಮಾಜ ಸೇವಕ ಕಾರ್ತಿಕ್ ಶೆಟ್ಟಿ ಮಜಿಬೈಲು ಭಾಗವಹಿಸುವರು.
‘ಗೇನದ ಮಂಟಮೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಾಡು, ನುಡಿ, ಸಂಸ್ಕೃತಿಯ ಉಳಿವಿನಲ್ಲಿ ಭಾಷೆಯ ಪಾತ್ರ’ದ ಕುರಿತು ಶ್ರೀಕಾಂತ್ ಕಾರ್ಕಳ, ‘ತುಳುನಾಡಿನ ಸಾಹಿತ್ಯ ಪರಂಪರೆ’ ಕುರಿತು ಮಹಿ ಮೂಲ್ಕಿ ವಿಚಾರ ಮಂಡಿಸಲಿದ್ದಾರೆ. ಕಲತ ಬೊಳ್ಳಿ ಸನ್ಮಾನವನ್ನು ರಾಜೇಶ್ ಶೆಟ್ಟಿ ದೋಟ ಹಾಗೂ ಶ್ರೀಶಾವಾಸವಿ ತುಳುನಾಡ್ ಇವರಿಗೆ ಪ್ರದಾನಿಸಲಾಗುವುದು.
ಇದೇ ಕಾರ್ಯಕ್ರಮದಲ್ಲಿ ಅಶೋಕ ಎನ್. ಕಡೇಶಿವಾಲಯ ಇವರ ‘ಬದ್ಕ್ ಭಾಗ್ಯೊದ ಬೊಲ್ಪು’, ರಕ್ಷಿತ್ ಬಿ. ಕರ್ಕೇರ ಇವರ ‘ಮಾಯ್ಕದ ಮೆನ್ಪುರಿ’, ಉಮೇಶ್ ಶಿರಿಯ ಇವರ ‘ಮಲ್ಲಿಗೆದ ಜಲ್ಲಿ’ ಹಾಗೂ ‘ಸಂಪಿಗೆದ ಕಮ್ಮೆನ’, ಪದ್ಮನಾಭ ಪೂಜಾರಿ ನೇರಂಬೋಳು ಇವರ ‘ಎಸಲ ಪನಿ’ ಮತ್ತು ವಿಶ್ವನಾಥ ಕುಲಾಲ್ ಮಿತ್ತೂರು ಇವರ ‘ರುಪಾಯಿ ನೋಟು’ ಕೃತಿಗಳು ಬಿಡುಗಡೆಗೊಳ್ಳಲಿದೆ.
ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಸದಾನಂದ ನಾರಾವಿ, ಡಾ. ಅರುಣ್ ಉಳ್ಳಾಲ್, ಶಶಿರಾಜ್ ರಾವ್ ಕಾವೂರು, ಶಾಂತಾರಾಮ್ ವಿ. ಶೆಟ್ಟಿ, ರಘು ಇಡ್ಕಿದು, ಕುಶಾಲಾಕ್ಷಿ ವಿ. ಕಣ್ವತೀರ್ಥ, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಅನುರಾಧಾ ರಾಜೀವ್ ಸುರತ್ಕಲ್, ವಿಜಯಲಕ್ಷ್ಮೀ ಕಟೀಲ್ ಮತ್ತಿತರರು ಉಪಸ್ಥಿತರಿರುವರು. ಸಾಹಿತಿ ಶಾಂತಾರಾಮ್ ವಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ‘ಬಾನದಾರೆ’ ತುಳು ಕವಿಗೋಷ್ಠಿ ನಡೆಯಲಿದ್ದು, ಸುಮಾರು 36 ಮಂದಿ ಕವಿಗಳು ಕವನ ವಾಚಿಸಲಿದ್ದಾರೆ.