ತುಮಕೂರು : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ‘ತುಮಕೂರು ಜಿಲ್ಲಾ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಡಾ. ಅಗ್ರಹಾರ ಕೃಷ್ಣಮೂರ್ತಿ ಇವರು ಸಮ್ಮೇಳನಾಧ್ಯಕ್ಷತೆಯಲ್ಲಿ ದಿನಾಂಕ 29 ನವೆಂಬರ್ 2024 ಮತ್ತು 30 ನವೆಂಬರ್ 2024ರಂದು ತುಮಕೂರು ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 29 ನವೆಂಬರ್ 2024ರಂದು ಬೆಳಿಗ್ಗೆ 8-00 ಗಂಟೆಗೆ ಜಾನಪದ ಕಲಾ ತಂಡದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಸುಗಮ ಸಂಗೀತ ಪ್ರಸ್ತುತಿಯ ಬಳಿಕ ರಾಷ್ಟ್ರ ಧ್ವಜಾರೋಹಣ, ನಾಡ ಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಜಾರೋಹಣ ನಡೆಯಲಿದೆ. 10-00 ಗಂಟೆಗೆ ಡಾ. ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರಿನ ಸಾಹಿತಿಗಳು ಹಾಗೂ ಚಿಂತಕರಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಇವರು ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕೆ.ಎನ್. ರಾಜಣ್ಣ ಇವರು ಸ್ಮರಣ ಸಂಚಿಕೆ ‘ಕಲ್ಪಸಂಪದ’, ಸಮ್ಮೇಳನಾಧ್ಯಕ್ಷರ ಕೃತಿಗಳಾದ ನಾಡ ವರ್ಗಳ್ – ವ್ಯಕ್ತಿ ಚಿತ್ರಗಳು, ಕಾಲ್ದಾರಿ – ವಿಮರ್ಶಾ ಲೇಖನಗಳು ಮತ್ತು ಜೀನ್ಸ್ ಪ್ಯಾಂಟ್ ಖಾದಿ ಷರ್ಟ್ – ಅಂಕಣ ಬರಹಗಳು, ಟಿ.ಬಿ. ಜಯಚಂದ್ರ ಇವರು ‘ನುಡಿ ಹೆಜ್ಜೆ 3’, ಶ್ರೀ ಎಸ್.ಆರ್. ಶ್ರೀನಿವಾಸ್ ಇವರು ‘ಸಿಹಿಜೀವಿ ಹನಿಗಳು’, ಶ್ರೀ ರಾಜೇಂದ್ರ ಆರ್. ಇವರು ಪ್ರೊ. ಎಂ.ಜಿ. ರಂಗಸ್ವಾಮಿಯವರ ‘ಡಾಬ್ಸ್’ ಹಾಗೂ ಶ್ರೀಮತಿ ಶುಭ ಕಲ್ಯಾಣ್ ಇವರು ಡಾ. ರೇಖಾ ಹಿಮಾನಂದ್ ಅವರ ‘ಗುಬ್ಬಿ ತಾಲೂಕು ಸಂಕಥನ’ ಕೃತಿಗಳನ್ನು ಬಿಡುಗಡೆ ಮಾಡಲಿರುವರು. ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಭು ಜಿ. ಇವರು ಪುಸ್ತಕ ಪ್ರದರ್ಶನ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಅಶೋಕ್ ಕೆ.ವಿ. ಇವರು ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.
ಏರುಹೊತ್ತು 12-45ಕ್ಕೆ ಗೋಷ್ಠಿ 1ರಲ್ಲಿ ಚಿತ್ರದುರ್ಗದ ಸಂಸ್ಕೃತಿ ಚಿಂತಕರಾದ ಪ್ರೊ. ಮೀರಾಸಾಬಿಹಳ್ಳಿ ಶಿವಣ್ಣ ಇವರಿಂದ ‘ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿ 2ರಲ್ಲಿ ‘ದೃಶ್ಯ ಮಾಧ್ಯಮ ಮತ್ತು ಸಾಹಿತ್ಯ’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಗೋಷ್ಠಿ 3ರಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ, ಗೋಷ್ಠಿ 4ರಲ್ಲಿ ಜಿಲ್ಲೆಯ ಸಾಹಿತಿ ಕಲಾವಿದರ ಚಿಂತನೆ, ಗೋಷ್ಠಿ 5ರಲ್ಲಿ ಜಾನಪದ ಕಲೆಗಳ ಪರಿಚಯ – ಪ್ರಾತ್ಯಕ್ಷಿಕೆ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಕಲಾ ಪ್ರಕಾರಗಳು ವೀರಗಾಸೆ, ಗೊರವರ ಕುಣಿತ, ಸೋಮನಕುಣಿತ, ತಮಟೆವಾದ್ಯ, ಪಟದಕುಣಿತ. ಸಂಜೆ 7-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಂಗಗೀತೆಗಳ ಗಾಯನ, ದಿಬ್ಬೂರು ಮಂಜು ಮತ್ತು ತಂಡದವರಿಂದ ಸುಗಮ ಸಂಗೀತ ಪ್ರಸ್ತುತಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಣಿಗಲ್ ಕಲಾದರ್ಪಣ ಗುರುಶ್ರೀ ದಾಮೋದರ ನಾಯಕ್ ಮತ್ತು ತಂಡದವರಿಂದ ನೃತ್ಯ -1, ಕುಣಿಗಲ್ ಕುಮಾರಿ ಅಮೂಲ್ಯ ಮತ್ತು ತಂಡದವರಿಂದ ನೃತ್ಯ -2, ತುಮಕೂರು ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದ ವಿದುಷಿ ರತಿಕಾ ಸಾಗರ್ ಮತ್ತು ತಂಡದವರಿಂದ ನೃತ್ಯ ರೂಪಕ -3, ತುಮಕೂರು ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದ ವಿದ್ವಾನ್ ಡಾ. ಸಾಗರ್ ಟಿ.ಎಸ್. ಮತ್ತು ತಂಡದವರಿಂದ ನೃತ್ಯ -4 ನಡೆಯಲಿದೆ.
ದಿನಾಂಕ 30 ನವೆಂಬರ್ 2024ರಂದು ಬೆಳಿಗ್ಗೆ 8-30 ಗಂಟೆಗೆ ತುಮಕೂರಿನ ಶ್ರೀ ಸಿದ್ಧೇಂದ್ರ ಕುಮಾರ್ ಹಿರೇಮಠ್ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯಲಿರುವ ಶಾಲಾ ಮಕ್ಕಳ ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗೋಷ್ಠಿ 6ರಲ್ಲಿ ‘ಮಹಿಳಾ ಚಿಂತನೆ’ ಗೋಷ್ಠಿ 7ರಲ್ಲಿ ‘ಕೌಶಲ್ಯ ಪಥ – ಯುವ ಸಬಲೀಕರಣ’, ಗೋಷ್ಠಿ 8ರಲ್ಲಿ ‘ಕವಿಗೋಷ್ಠಿ’, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಶ್ರೀ ಕೆ.ಎಸ್. ಸಿದ್ಧಲಿಂಗಪ್ಪ ಇವರ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ಹಾಗೂ ಇಳಿಹೊತ್ತು 4-00 ಗಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಪಿಗೆ ಶ್ರೀ ಸಾಗರಲೋಕ ನೃತ್ಯ ಕಲಾ ಕೇಂದ್ರದ ಶ್ರೀ ವೆಂಕಟೇಶ್ ಪ್ರಸಾದ್ ಮತ್ತು ತಂಡದವರಿಂದ ನೃತ್ಯ -5, ತುಮಕೂರಿನ ವರ್ಣಶ್ರೀ ಕಲಾಕೇಂದ್ರ ಶ್ರೀ ವಿದ್ಯಾ ಟಿ.ಎಸ್. ಮತ್ತು ತಂಡದವರಿಂದ ನೃತ್ಯ -6, ತುಮಕೂರು ವಿದುಷಿ ಅನಘ ಹರಿ ಪ್ರಿಯ ಮತ್ತು ತಂಡದವರಿಂದ ನೃತ್ಯ -6, ಮಧುಗಿರಿಯ ಸಾನ್ವಿ ಸಾಂಸ್ಕೃತಿಕ ಟ್ರಸ್ಟ್ ಕಲ್ಪನಾ ಗೋವಿಂದರಾಜು ಇವರಿಂದ ಸುಗಮ ಸಂಗೀತ, ಶಾಲಾ ಮಕ್ಕಳಿಂದ ಗೀತ ನೃತ್ಯ ಹಾಗೂ ಶ್ರೀ ಡಿ. ನಾಗರಾಜ್ ಇವರಿಂದ ‘ಭೂ ಕೈಲಾಸ’ ಹರಿಕಥೆ ಪ್ರಸ್ತುತಗೊಳ್ಳಲಿದೆ.