ಬೆಳಗಾವಿ : ವಿಚಾರವಾಣಿ ಸಾಹಿತ್ಯ ಪ್ರಕಾಶನ ನೇಸರಗಿ ಹಾಗೂ ಭವಾನಿ ಪ್ರಕಾಶನ ಮಲ್ಲಮ್ಮನ ಬೆಳವಡಿ ಜಂಟಿಯಾಗಿ ಆಯೋಜಿಸುವ ಶ್ರೀ ಸಿ. ವೈ. ಮೆಣಸಿನಕಾಯಿ ರಚಿಸಿದ ‘ಭೋಜರಾಜನ ಪುನರ್ಜನ್ಮ ಇನ್ನಿತರ ಸತ್ಯಕಥೆಗಳು’ (ಅನುವಾದಿತ) ಹಾಗೂ ಶ್ರೀ ಲಕ್ಷ್ಮಣ ಕೆ. ಡೊಂಬರ ರಚಿಸಿದ ‘ಈ ಸ್ನೇಹ ಬಂಧನ’ ಎರಡು ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 02 ಮಾರ್ಚ್ 2025ರ ರವಿವಾರದಂದು ಬೆಳಿಗ್ಗೆ ಘಂಟೆ 10.00ಕ್ಕೆ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಕ. ಸಾ.ಪ. ಬೆಳಗಾವಿ ಇದರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಶ್ರೀ ಮೊಹ್ಮದ್ ರೋಷನ್ (ಐ. ಎ. ಎಸ್) ಕೃತಿಗಳ ಲೋಕಾರ್ಪಣೆ ಗೊಳಿಸಲಿದ್ದಾರೆ. ಹಿರಿಯ ಭಾಷಾ ಶಿಕ್ಷಕರು ಹಾಗೂ ಸಾಹಿತಿಗಳಾದ ಡಾ. ಸುನೀಲ ಪರೀಟ ಇವರು ‘ಭೋಜರಾಜನ ಪುನರ್ಜನ ಇನ್ನಿತರ ಸತ್ಯಕಥೆಗಳು’ ಕೃತಿಯನ್ನು ಪರಿಯಿಸಲಿದ್ದು, ಕ. ಸಾ. ಪ. ಬೆಳಗಾವಿಯ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಚಾರಿತ್ರಿಕ ಕಾದಂಬರಿಕಾರರಾದ ಶ್ರೀ ಯ.ರು. ಪಾಟೀಲ ಇವರು ‘ಈ ಸ್ನೇಹ ಬಂಧನ’ ಕೃತಿ ಪರಿಚಯಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲೆ ಪೊಲೀಸ್ ಇಲಾಖೆ ವಾಹನ ವಿಭಾಗದ ನಿರೀಕ್ಷಕರಾದ ಶ್ರೀ ಎ.ಎಸ್. ವಾರ, ನೇಸರಗಿ ಪೊಲೀಸ್ ಠಾಣೆಯ ಸಿ.ಪಿ. ಐ. ಆದ ಶ್ರೀ ರಾಘವೇಂದ್ರ ಹವಾಲ್ದಾರ, ಹಿರಿಯ ಸಾಹಿತಿಗಳಾದ ಶ್ರೀ ಎಸ್.ಎಮ್ ಇಂಚಲ, ಹಿರಿಯ ಸಾಹಿತಿಗಳಾದ ಶ್ರೀ ಶಿವಯೋಗಿ ಕುಸಗಲ್, ಕವಿಗಳಾದ ಶ್ರೀ ಸುರೇಶ ಕೊರಕೊಪ್ಪ ಹಾಗೂ ಕ. ಸಾ. ಪ. ಬೆಳಗಾವಿಯ ಗೌರವ ಕಾರ್ಯದರ್ಶಿಯಾದ ಶ್ರೀ ಎಂ. ವೈ. ಮೆಣಸಿನಕಾಯಿ ಭಾಗವಹಿಸಲಿದ್ದಾರೆ.