ಮೈಸೂರು : ಕರ್ಣಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ 2024-25ನೇ ಸಾಲಿನ ಹಿಂದೂಸ್ತಾನಿ ತಾಳವಾದ್ಯ ಪರೀಕ್ಷೆ ಸೀನಿಯರ್ ವಿಭಾಗದಲ್ಲಿ ಉದಯ ಕುಮಾರ್ ಇವರು ಶೇ.72.4% ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿರುತ್ತಾರೆ.
ಇವರು ಉಡುಪಿಯ ತಬಲಾ ಗುರುಗಳಾದ ವಿದ್ವಾನ್ ಎನ್. ಮಾಧವ ಆಚಾರ್ಯರ ಶಿಷ್ಯರಾಗಿದ್ದು, ಪ್ರಸ್ತುತ ತಬಲಾದಲ್ಲಿ ಉನ್ನತ ಶಿಕ್ಷಣದ ತರಬೇತಿ ಪಡೆಯುತ್ತಿದ್ದಾರೆ. ಮಂಗಳೂರಿನ ಎಂ.ಆರ್.ಪಿ.ಎಲ್. ಸಂಸ್ಥೆಯಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.