Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉದಯರಾಗ ಸರಣಿಯ 56ನೇ ಕಾರ್ಯಕ್ರಮ
    Uncategorized

    ಉದಯರಾಗ ಸರಣಿಯ 56ನೇ ಕಾರ್ಯಕ್ರಮ

    October 9, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಇವರು ಸುರತ್ಕಲ್‌ನ ಮೇಲು ಸೇತುವೆಯ ತಳಭಾಗದ ಎಂ.ಸಿ.ಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸುತ್ತಿರುವ ಉದಯರಾಗ ಸರಣಿ ಕಾರ್ಯಕ್ರಮದ 56ನೇ ಕಾರ್ಯಕ್ರಮವು ದಿನಾಂಕ 06 ಅಕ್ಟೋಬರ್ 2024ರ ಭಾನುವಾರದಂದು ನಡೆಯಿತು.
    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ ರಾವ್ ಮಾತನಾಡಿ “ಪ್ರಸಕ್ತ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಯುವ ಕಲಾವಿದರು ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ. ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಅವರ ಪ್ರತಿಭೆಯ ಪ್ರಕಾಶನಕ್ಕೆ ಸಾಮಾಜಿಕ ಸಂಸ್ಥೆಗಳು ಸಹಕಾರಿಗಳಾಗಬೇಕು.” ಎಂದು ನುಡಿದರು.
    ಚೆನ್ನೈ ಇಲ್ಲಿನ ನಮೃತಾ ಎಸ್. ಅವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು.ಇವರಿಗೆ ವಯಲಿನ್‌ನಲ್ಲಿ ಅನನ್ಯ ಪಿ.ಎಸ್. ಪುತ್ತೂರು ಹಾಗು ಮೃದಂಗದಲ್ಲಿ ಆಚಿಂತ್ಯ ಕೃಷ್ಣ ಪುತ್ತೂರು ಸಹಕರಿಸಿದರು.
    ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಇದರ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಮಾತನಾಡಿ “ಕನ್ನಡ ಕೃತಿಗಳನ್ನು ಆಧಾರಿಸಿ ಪೂರ್ಣ ಪ್ರಮಾಣದಲ್ಲಿ ಸಂಗೀತ ಕಛೇರಿ ನಡೆಸುವ ಮೂಲಕ ನಮೃತಾ ಎಸ್. ತಮ್ಮ ಪ್ರತಿಭೆ ತೋರ್ಪಡಿಸಿದ್ದಾರೆ.” ಎಂದರು.
    ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್‌ ರಾವ್, ಸಂಯೋಜಕ ಸತೀಶ್ ಸದಾನಂದ್, ಸಂಗೀತ ಗುರುಗಳಾದ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್, ಶ್ರೀನಿವಾಸ ರಾವ್, ಪ್ರೊ. ಪಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleರಾಜ್ಯಮಟ್ಟದ ಕವನ ಸ್ಪರ್ಧೆಗೆ ಕವಿತೆಗಳ ಆಹ್ವಾನ
    Next Article ಕುಂಜೂರು ಪಂಜದಲ್ಲಿ ‘ವಿಂಶತಿ ಸಂಭ್ರಮ’ದ ಸರಣಿ ತಾಳಮದ್ದಳೆ ಎಂಟನೆಯ ಕೂಟ
    roovari

    Add Comment Cancel Reply


    Related Posts

    ಭಾಸ್ಕರ ರೈ ಕುಕ್ಕುವಳ್ಳಿಯವರ ‘ಕಲ್ಲುರ್ಟಿ ಕಥನ’ ನಮ್ಮ ಕೊಂಬಾರು ಯೂಟ್ಯೂಬ್ ನಲ್ಲಿ ಬಿಡುಗಡೆ

    January 29, 2026

    ಹಾಸನದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ | ಜನವರಿ 06

    January 5, 2026

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಲೈಟ್ಸ್ ಆಫ್’ ನಾಟಕ ಪ್ರದರ್ಶನ | ಡಿಸೆಂಬರ್ 19

    December 18, 2025

    ಮೈಸೂರಿನ ಕಿರು ರಂಗಮಂದಿರದಲ್ಲಿ ‘ನಿರಂತರ ರಂಗ ಉತ್ಸವ – 2025’ | ಡಿಸೆಂಬರ್ 17ರಿಂದ 21

    December 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.