ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ.) ಮತ್ತು ನಾಗರಿಕ ಸಲಹಾ ಸಮಿತಿ(ರಿ.) ಸುರತ್ಕಲ್ ಆಯೋಜಿಸುವ ಉದಯರಾಗ ಕಾರ್ಯಕ್ರಮ ಸರಣಿಯ ‘ಉದಯರಾಗ–58’ ಕಾರ್ಯಕ್ರಮವು ದಿನಾಂಕ 05 ಜನವರಿ 2025ರಂದು ಸುರತ್ಕಲ್‌ನ ಮೇಲು ಸೇತುವೆಯ ತಳಭಾಗದ ಎಂ. ಸಿ. ಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ‘ಅರೋಹಣಂ ಸ್ಕೂಲ್ ಆಫ್ ಮ್ಯೂಸಿಕ್’ ಇದರ ಗುರು ಹಾಗೂ ಸಂಗೀತ ಕಲಾವಿದ ಡಾ. ವಿದ್ವಾನ್ ಅನೀಶ್ ವಿ. ಭಟ್ ಮಾತನಾಡಿ “ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳಿಗೆ ಪೂರಕ ವಾತಾವರಣ ಲಭ್ಯವಾದಾಗ ಪರಿಪೂರ್ಣ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ.” ಎಂದು ನುಡಿದರು.
ಡಾ. ವಿದ್ವಾನ್ ಅನೀಶ್ ವಿ. ಭಟ್ ಅವರ ಶಿಷ್ಯೆಯರಾದ ಶ್ರೀವರದಾ ಪಟ್ಟಾಜೆ, ಸುಮನ ಕೆ., ಚಿನ್ಮಯಿ ವಿ. ಭಟ್, ಹವ್ಯಶ್ರೀ ಕೆ.ಟಿ., ರಕ್ಷ ಎ. ಆರ್. ಇವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು. ಇವರಿಗೆ ವಯಲಿನ್‌ನಲ್ಲಿ ಸುನಾದ ಪಿ. ಎಸ್. ಹಾಗೂ ಮೃದಂಗದಲ್ಲಿ ಅವಿನಾಶ್ ಬಿ. ಸಹಕರಿಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ.)ಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಸುರತ್ಕಲ್ ರೋಟರಿ ಕ್ಲಬ್ ಇದರ ಪ್ರೊ. ಪಿ. ಕೃಷ್ಣಮೂರ್ತಿ ವಂದಿಸಿದರು.
ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್. ಜಿ., ಸುರತ್ಕಲ್ ಇನ್ನರ್ ವೀಲ್ ಕ್ಲಬ್ ಇದರ ನಿಕಟಪೂರ್ವ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್, ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್, ಸಂಯೋಜಕ ಸತೀಶ್ ಸದಾನಂದ್, ಸಚ್ಚಿದಾನಂದ ಹೊಸಬೆಟ್ಟು, ಕುಳಾಯಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಚಂದ್ರಶೇಖರ ಕೆ. ಪಿ. ಮತ್ತಿತರರು ಉಪಸ್ಥಿತರಿದ್ದರು.