ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ ) ಮತ್ತು ಸುರತ್ಕಲ್ ನ ನಾಗರಿಕ ಸಲಹಾ ಸಮಿತಿ(ರಿ ) ಸಹಭಾಗಿತ್ವದಲ್ಲಿ ಉದಯ ರಾಗ- 62 ಕಾರ್ಯಕ್ರಮ ಸುರತ್ಕಲ್ ನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ನಡೆಯಿತು.
ದೀಪಾವಳಿ ವಿಶೇಷವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಭರತಾಂಜಲಿ (ರಿ ) ಸಂಸ್ಥೆಯ ಸ್ಥಾಪಕ ಹಾಗೂ ಗುರು ಶ್ರೀಧರ ಹೊಳ್ಳ ಮಾತನಾಡಿ “ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾಸ್ತ್ರೀಯ ಸಂಗೀತ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಭಾವಪೂರ್ಣವಾಗಿ ಹಾಡಿದಾಗ ಸಂಗೀತದ ಅನುಸಂಧಾನ ಸಾಧ್ಯವಾಗುತ್ತದೆ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗಣೇಶ್ ಐತಾಳ್, ಕೃಷ್ಣಾಪುರ ಹಾಡುಗಾರಿಕೆ ಸಂಗೀತ ಕಛೇರಿ ನಡೆಸಿದರು. ಇವರಿಗೆ ಕೊಳಲಿನಲ್ಲಿ ಪ್ರಣವ್ ಅಡಿಗ ಉಡುಪಿ ಮತ್ತು ತಬಲಾದಲ್ಲಿ ಕಾರ್ತಿಕ್ ಭಟ್ ಇನ್ನಂಜೆ ಸಹಕರಿಸಿದರು.
ಹಿರಿಯ ಯಕ್ಷಗಾನ ಭಾಗವತ ವೆಂಕಟರಮಣ ಐತಾಳ್ ಕೃಷ್ಣಾಪುರ ಹಾಗೂ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ. ಕೆ. ರಾಜಮೋಹನ್ ರಾವ್ ಉಪಸ್ಥಿತರಿದ್ದರು. ಸುರತ್ಕಲ್ ರೋಟರಿಯ ಸೇವಾ ನಿರ್ದೇಶಕ ಕೃಷ್ಣಮೂರ್ತಿ ಸ್ವಾಗತಿಸಿ, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಯಡಾಡಿ ಮತ್ಯಾಡಿಯಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’
Next Article ಶಾಲೆಗಳಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಪ್ರದರ್ಶನ
