ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 55’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ದಿನಾಂಕ 01-09-2024 ಭಾನುವಾರ ಪೂರ್ವಾಹ್ನ ಗಂಟೆ 6-00ಕ್ಕೆ ನಡೆಯಲಿದೆ.
ಕಾರ್ತಿಕ್ ರಾವ್ ಇಡ್ಯಾ ಇವರ ನಿರ್ದೇಶನದಲ್ಲಿ ಗಾಯನ ಮಿತ್ರರು ಸುರತ್ಕಲ್ ಇವರು ಅರ್ಪಿಸುವ ‘ನಾಮ ಸಂಕೀರ್ತನ’ ಕಾರ್ಯಕ್ರಮ ನಡೆಯಲಿದ್ದು, ಕಾರ್ತಿಕ್ ರಾವ್ ಇಡ್ಯಾ, ಸಂಪತ್ ಎಸ್.ಬಿ., ಶ್ರೀನಿಧಿ ರಾವ್ ಮತ್ತು ತಂಡದ ಸದಸ್ಯರ ಹಾಡುಗಾರಿಕೆಗೆ ಕುಳಾಯಿಯ ವಿಜಯ್ ಆಚಾರ್ಯ ಹಾರ್ಮೋನಿಯಂ ಹಾಗೂ ಪ್ರಥಮ್ ಚೇಳ್ಯಾರು ತಬಲಾ ಸಾಥ್ ನೀಡಲಿದ್ದಾರೆ. ಸಾಮಾಜಿಕ ಸೇವೆ ಮತ್ತು ರೋಟರಿ ಕ್ಲಬ್ ಸುರತ್ಕಲ್ ಇದರ ನಿರ್ದೇಶಕರಾದ ಶ್ರೀ ರಾಮಚಂದ್ರ ಬಿ. ಕುಂದರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಮಣಿ ಕೃಷ್ಣಸ್ವಾಮಿ ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

