ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳ ಸಹಯೋಗದಲ್ಲಿ ಸುರತ್ಕಲ್ ಮೇಲುಸೇತುವೆಯ ತಳಭಾಗದ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ನಡೆಯುತ್ತಿರುವ 59ನೇ ಉದಯರಾಗ ಸರಣಿ ಕಾರ್ಯಕ್ರಮವು ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಸುರತ್ಕಲ್ ನ ಎನ್.ಐ.ಟಿ.ಕೆ.ಯ ಜಂಟಿ ಕುಲಸಚಿವ ರಾಮ್ ಮೋಹನ್ ವೈ. “ಶಾಸ್ತ್ರೀಯ ಸಂಗೀತ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಯುವ ಜನತೆ ಇದರತ್ತ ಗಮನ ಕೊಡಬೇಕು” ಎಂದು ನುಡಿದರು. ಪ್ರಾರ್ಥನಾ ಸಾಯಿ ನರಸಿಂಹನ್ ಇವರ ಶಿಷ್ಯೆ ಮತ್ತು ಸುಪುತ್ರಿ ಸುಮೇಧಾ ಎಸ್. ಇವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಶ್ರೀವರದ ಪಟ್ಟಾಜೆ ವಯಲಿನ್ ನಲ್ಲಿ ಹಾಗೂ ಪವನ್ ಅಕ್ಕಡ್ಕ ಮೃದಂಗದಲ್ಲಿ ಸಹಕರಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಕೃಷ್ಣಮೂರ್ತಿ ಪಿ. ವಂದಿಸಿದರು. ಹಿರಿಯ ಕಲಾವಿದ ಸಾಯಿ ನರಸಿಂಹನ್, ಪ್ರಾರ್ಥನಾ ಸಾಯಿ ನರಸಿಂಹನ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ರಾಜ ಮೋಹನ್ ರಾವ್ ಹಾಗೂ ಸಂಯೋಜಕ ಸತೀಶ್ ಸದಾನಂದ್ ಉಪಸ್ಥಿತರಿದ್ದರು.