ಉಡುಪಿ : ಎಂ.ಜಿ.ಎಂ. ಪದವಿ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ ಕಾಲೇಜಿನ ‘ಕನ್ನಡ ಸಾಹಿತ್ಯ ಸಂಘ’ವು, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ – ಉಡುಪಿ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ‘ಕಥಾ ಕಮ್ಮಟ’ವನ್ನು ಹಮ್ಮಿಕೊಂಡಿದೆ. ಕಥಾಕಮ್ಮಟದಲ್ಲಿ ಹೆಸರಾಂತ ಹಿರಿಯ ಕತೆಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಕತೆ ಬರೆಯಲು ಮಾರ್ಗದರ್ಶನ ನೀಡಲಿದ್ದಾರೆ. ಕಥಾಕಮ್ಮಟವು ದಿನಾಂಕ 17-11-2023 ಶುಕ್ರವಾರ ನಡೆಯಲಿದೆ. ಉಡುಪಿ ಜಿಲ್ಲೆಯ ಕಾಲೇಜುಗಳಿಂದ ಕತೆ ಬರೆಯುವ ಆಸಕ್ತಿಯಿರುವ ವಿದ್ಯಾರ್ಥಿಗಳು ಹೆಸರನ್ನು ದಿನಾಂಕ 10-11-2023ರ ಒಳಗೆ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್ 9449332242
ಅಥವಾ ಕ.ಸಾ.ಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ ಎಚ್.ಪಿ. 9845240309 ಇವರನ್ನು ಸಂಪರ್ಕಿಸಬಹುದು.