ಉಡುಪಿ : ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಅನಿಲ್ ಕುಮಾರ್ ಅವರು ರಚಿಸಿದ ‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕಾವ್ಯ ಸಂಪುಟ ಬಿಡುಗಡೆ ಸಮಾರಂಭವು ದಿನಾಂಕ 07-01-2024ರಂದು ನಡೆಯಿತು.
ಈ ಕಾರ್ಯಕ್ರಮದ ಗೋಷ್ಠಿಗಳ ಸಮಾರೋಪದಲ್ಲಿ ಭಾಗವಹಿಸಿದ ಗಣಕ ತಜ್ಞ ಡಾ. ಕೆ.ಪಿ. ರಾವ್ ಮಾತನಾಡುತ್ತಾ “ಕನ್ನಡ ಸಾಹಿತ್ಯ ಮತ್ತು ಕಲೆಯ ವಿಚಾರದಲ್ಲಿ ಇಂದಿನ ಪೀಳಿಗೆ ಮತ್ತಷ್ಟು ಸಂಶೋಧನೆ, ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಕ್ಷೇತ್ರ ಕಾರ್ಯ ಅಧ್ಯಯನದ ಬಗ್ಗೆ ಇಂದಿನ ಯುವ ಪೀಳಿಗೆ ಆಸಕ್ತಿಯಿಂದ ಮುಂದಾಗಬೇಕು. ಎಲ್ಲವನ್ನು ಕಂಪ್ಯೂಟರ್ ಮಾಹಿತಿಯೇ ಆಧರಿಸಿ ಅಧ್ಯಯನ ಮಾಡುವುದು ಸರಿಯಾದ ಪ್ರಕ್ರಿಯೆಯಲ್ಲ. ಮಾಹಿತಿ ಮಾತ್ರವಲ್ಲದೆ ವಿಶ್ಲೇಷಣೆಯ ಅಗತ್ಯವೂ ಇದ್ದು, ಇದಕ್ಕೆ ಕ್ಷೇತ್ರ ಕಾರ್ಯದ ಅಧ್ಯಯನ, ಸಂಶೋಧನೆ ಅಗತ್ಯವಾಗಿದೆ. ಕನ್ನಡದ ಸಾಹಿತ್ಯ, ಕಲೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆದು ಮುಂದಿನ ಪೀಳಿಗೆಗೂ ಈ ಮೌಲ್ಯ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಡಾ. ಅನಿಲ್ ಕುಮಾರ್ ಅವರ ‘ಜಿಲ್ಲಾ ಬರಹಗಾರರ ಕೋಶ’ ಯುವ ಸಂಶೋಧಕರಿಗೆ ಅಗತ್ಯ ಮಾರ್ಗದರ್ಶಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಯು. ಸೀತಾರಾಮ ಶೆಟ್ಟಿ ಉಪ್ಪುಂದ ಹಾಗೂ ಶ್ರೀ ಸಿದ್ಧಿವಿನಾಯಕ ಪ.ಪೂ. ಕಾಲೇಜು ಸಂಸ್ಥಾಪಕ ಕೆರಾಡಿ ಶ್ರೀ ಚಂದ್ರಶೇಖರ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಕೃತಿ ಸಂಪಾದಕ ಡಾ. ಅನಿಲ್ ಕುಮಾರ್ ಆಶಯ ಭಾಷಣ ಮಾಡಿದರು. ಲೇಖಕರಾದ ನಾರಾಯಣ ಬಲ್ಲಾಳ್, ಗೋಪಾಲ ಭಟ್ ಹೆಚ್., ಡಾ. ಎನ್.ಟಿ. ಭಟ್, ಭುವನಪ್ರಸಾದ್ ಹೆಗ್ಡೆ ಮತ್ತು ಪ್ರಮುಖರಾದ ನೀಲಕಂಠ ಪ್ರಭು ತೆಕ್ಕಟ್ಟೆ, ಯು. ನಜೀರ್ ಅಹಮ್ಮದ್, ಶ್ರೀಮತಿ ಗಿರಿಜಾ ಆರ್. ಶೆಟ್ಟಿ, ಶ್ರೀಮತಿ ಸುಲೋಚನಾ ಆರ್. ಶೆಟ್ಟಿ, ಡಾ. ಲಕ್ಷ್ಮೀಪ್ರಕಾಶ್, ಜಯ ಕೆ. ಶೆಟ್ಟಿ, ಸದಾನಂದ ಶೆಣೈ, ಸುದರ್ಶನ್ ನಾಯಕ್, ಡಾ. ಮಹಾಬಲೇಶ್ವರ ರಾವ್, ಪ್ರೋ. ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ. ಪುತ್ತಿ ವಸಂತ ಕುಮಾರ್, ರಾಘವೇಂದ್ರ ತುಂಗ, ನಾರಾಯಣ ಶೆಣೈ, ಶ್ರೀಮತಿ ಸುಜಯಾ ಶೇಖರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಡಾ. ಜಯರಾಮ ಶೆಟ್ಟಿಗಾರ್, ವಿಠ್ಠಲ್ ಶೆಟ್ಟಿಗಾರ್ ಸಗ್ರಿ, ಮಂಜುನಾಥ ಶೆಟ್ಟಿ, ಕೋಟ ಶ್ರೀಕೃಷ್ಣ ಅಹಿತಾನಲ ಉಪಸ್ಥಿತರಿದ್ದರು.
ಪ್ರೊ. ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ ಸ್ವಾಗತಿಸಿ, ರಾಘವೇಂದ್ರ ತುಂಗ ನಿರೂಪಿಸಿದರು. ಬೆಳಗ್ಗಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಸಂಪುಟವನ್ನು ಹಂಪಿ ಕನ್ನಡ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ. ಸುಬ್ಬಣ್ಣ ರೈ ಬಿಡುಗಡೆಗೊಳಿಸಿದರು. ಡಾ. ಪಾದೇಕಲ್ಲು ವಿಷ್ಣು ಭಟ್, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ಡಿ.ಸಿ.ಎಂ.ಡಿ. ಮುಂಬಯಿ ಎಂ. ರವೀಂದ್ರ ರೈಮತ್ತು ಬಾಲಾಜಿ ಪ್ರಕಾಶನ ಸಂಸ್ಥೆಯ ಉದಯ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಡೆದ ವಿಚಾರಗೋಷ್ಠಿಗಳು : ವಿಚಾರಗೋಷ್ಠಿ- 1ರಲ್ಲಿ ಉಪನ್ಯಾಸ -1 ವಿಷಯ : ‘ಉಡುಪಿ ಜಿಲ್ಲಾ ಜಾನಪದ ವಿಧಿ ಮತ್ತು ಆಚರಣೆ’ ಉಪನ್ಯಾಸಕರು : ಜಾನಪದ ವಿದ್ವಾಂಸರಾದ ಶ್ರೀ ಸದಾನಂದ ಪಿ.ಕೆ. ಪಡುಬಿದ್ರಿ, ಉಪನ್ಯಾಸ- 2 ವಿಷಯ : ‘ಜೀವನಾವರ್ತನ ಆಚರಣೆಯಲ್ಲಿ ಸಾಹಿತ್ಯಾಭಿವ್ಯಕ್ತಿ’ ಉಪನ್ಯಾಸಕರು : ಡಾ. ಸುಲೋಚನಾ ಕೊಡವೂರು,
ವಿಚಾರಗೋಷ್ಠಿ- 2ರಲ್ಲಿ ಉಪನ್ಯಾಸ- 1 ವಿಷಯ : ‘ಉಡುಪಿ ಜಿಲ್ಲೆಯ ಸ್ವಾತಂತ್ರ್ಯಪೂರ್ವದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಲೋಕದ ಸಂಕ್ಷಿಪ್ತಾವಲೋಕನ’ ಉಪನ್ಯಾಸಕರು : ಮುಂಬೈಯ ನಿವೃತ್ತ ಅಭಿಯಂತರರು ಮತ್ತು ಚಿಂತಕರಾದ ಶ್ರೀ ಚಂದ್ರಶೇಖರ ಶೆಣೈ,
ವಿಚಾರಗೋಷ್ಠಿ- 3ರಲ್ಲಿ ಉಪನ್ಯಾಸ- 1 ವಿಷಯ : ‘ಉಡುಪಿ ಜಿಲ್ಲೆಯ ಯಕ್ಷಗಾನ ಕಲೆ-ಮೇಳಗಳ ವ್ಯವಸ್ಥಾಪನದ ಸಮಕಾಲೀನ ಸವಾಲುಗಳು’ ಉಪನ್ಯಾಸಕರು : ಹಟ್ಟಿಯಂಗಡಿ ಸಿದ್ಧಿವಿನಾಯಕ ಯಕ್ಷಗಾನ ಮೇಳ ವ್ಯವಸ್ಥಾಪಕರು ಮತ್ತು ಶ್ರೀ ನಂದಿಕೇಶ್ವರ ಯಕ್ಷಗಾನ ಮೇಳ ಮೆಕ್ಕೆಕಟ್ಟೆ ಸಂಚಾಲಕರಾದ ಪ್ರೊ. ರಂಜಿತ್ ಕುಮಾರ್ ಶೆಟ್ಟಿ, ಉಪನ್ಯಾಸ-2 ವಿಷಯ : ‘ಯಕ್ಷಗಾನ ಕಲಾ ಪ್ರದರ್ಶನದ ಪ್ರಸ್ತುತ ಸಂದರ್ಭ’ ಉಪನ್ಯಾಸಕರು : ಡಾ. ಶ್ರೀಕಾಂತ ಸಿದ್ಧಾಪುರ, ಸಮನ್ವಯಕಾರರಾಗಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಂ.ಎಲ್. ಸಾಮಗ ಭಾಗವಹಿಸಿದರು.
ವಿಚಾರಗೋಷ್ಠಿ- 4ರಲ್ಲಿ ಉಪನ್ಯಾಸ- 1 ವಿಷಯ : ‘ಗಡಿನಾಡ ಮತ್ತು ಹೊರನಾಡ ಕನ್ನಡ ಪತ್ರಿಕೆಗಳು’ ಉಪನ್ಯಾಸಕರು : ಕಾಸರಗೋಡು ಪತ್ರಕರ್ತರಾದ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ, ಉಪನ್ಯಾಸ- 2 ವಿಷಯ : ‘ಹೊರನಾಡ ಪತ್ರಿಕೆಗಳು’ ಉಪನ್ಯಾಸಕರು : ಅದಮಾರು ಪಿ.ಯು. ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀ ಪ್ರಭಾಕರ ತುಮರಿ, ಉಪನ್ಯಾಸ- 3 ವಿಷಯ : ‘ಗಡಿನಾಡ ಕನ್ನಡ ಪತ್ರಿಕೆಗಳು’ (ಆಂಧ್ರ ಮತ್ತು ತಮಿಳುನಾಡು) ಉಪನ್ಯಾಸಕರು : ಪತ್ರಕರ್ತರಾದ ಶ್ರೀ ವಿಶ್ವ ಕುಂದಾಪುರ, ಉಪನ್ಯಾಸ- 4 ವಿಷಯ ಕಾರ್ಕಳ ತಾಲೂಕಿನ ಕನ್ನಡ ಪತ್ರಿಕೆಗಳು’ ಉಪನ್ಯಾಸಕರು : ಕೃಷಿಬಿಂಬದ ಸಂಪಾದಕರಾದ ಶ್ರೀ ರಾಧಾಕೃಷ್ಣ ತೋಡಿಕಾನ,
ವಿಚಾರಗೋಷ್ಠಿ- 5ರ ವಿಷಯ : ‘20ನೇ ಶತಮಾನದ ಉಡುಪಿ ಜಿಲ್ಲೆಯ ರಂಗಚಟುವಟಿಕೆಗಳು’ ಉಪನ್ಯಾಸ- 1 ವಿಷಯ : ‘20ನೇ ಶತಮಾನದ ಪೂರ್ವಾರ್ಧದ ರಂಗಚಟುವಟಿಕೆಗಳು’ ಉಪನ್ಯಾಸಕರು : ಮುಂಬೈಯ ಅಂಕಣಕಾರರು ಹಾಗೂ ರಂಗತಜ್ಞರಾದ ಶ್ರೀ ಗುಣಪಾಲ, ಉಪನ್ಯಾಸ- 2 ವಿಷಯ : ‘20ನೇ ಶತಮಾನದ ಉತ್ತರಾರ್ಧದ ರಂಗಚಟುವಟಿಕೆಗಳು’ ಉಪನ್ಯಾಸಕರು : ಬೆಂಗಳೂರಿನ ಖ್ಯಾತ ರಂಗಕರ್ಮಿ ಮತ್ತು ರಂಗ ನಿರ್ದೇಶಕರಾದ ಶ್ರೀ ಸುಧಾಕರ ಬನ್ನಂಜೆ, ಉಪನ್ಯಾಸ : 3 ವಿಷಯ ‘ಹೊರ ಜಿಲ್ಲೆಗಳಲ್ಲಿ ಗುರುತಿಸಿಕೊಂಡ ಉಡುಪಿ ಜಿಲ್ಲೆಯ ರಂಗಕರ್ಮಿಗಳು’ ಉಪನ್ಯಾಸಕರು : ನಿರ್ದೇಶಕರು ರಂಗತಜ್ಞರು ಮತ್ತು ಪತ್ರಕರ್ತರಾದ ಡಾ. ಶಂಕರ ಕೆಂಚನೂರು ಮುಂತಾದ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆದವು.