ಉಡುಪಿ: ಜಿ.ಪಂ ಉಡುಪಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಡುಪಿ, ಪುಣ್ಯಕೋಟಿ ಅನುಷ್ಠಾನ ಬೆಂಬಲ ಸಂಸ್ಥೆ ಹಾಗೂ ಜಲಜೀವನ ಮಿಷನ್ ಯೋಜನೆಯಡಿ ಶಶಿಚಂದ್ರ ಯಕ್ಷಗಾನ ಬಳಗ ಉಡುಪಿ ಇವರ ಸಹಯೋಗದಲ್ಲಿ ‘ಮನೆ ಮನೆಗೆ ಗಂಗೆ’ ಎನ್ನುವ ಯಕ್ಷಗಾನ ಪ್ರದರ್ಶನ ದಿನಾಂಕ 20-07-2023 ರಿಂದ 07-08-2023ರ ವರಿಗೆ ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯಿತು.
ದಿನಾಂಕ 20-07-2023ರಂದು ಕೋಟದ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೊಂಡು ಈ ಜಾಗೃತಿ ಯಕ್ಷಗಾನ ಪ್ರದರ್ಶನವು ದಿನಾಂಕ 07-08-2023ರಂದು ಉಡುಪಿಯ 80 ಬಡಗಬೆಟ್ಟು ರಾಜೀವಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಸಮಾರೂಪ ಗೊಂಡಿತು.
ಪ್ರೊ.ಪವನ್ ಕಿರಣ್ಕೆರೆ ವಿರಚಿತ ಈ ಪ್ರಸಂಗದ ಪ್ರದರ್ಶನದಲ್ಲಿ ವಸುಂಧರನಾಗಿ ಪಂಜು ಪೂಜಾರಿ ಕಮಲಶಿಲೆ, ಗಂಗೆಯಾಗಿ ಸುಧೀರ್ ಉಪ್ಪೂರು ಹಾಗೂ ರಂಗನಾಗಿ ಕಾರ್ತಿಕ್ ಪಾಂಡೇಶ್ವರ ಅಭಿನಯಿಸಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಕಾಂತ ರಾವ್ ಮೂಡುಬೆಳ್ಳೆ ಹಾಗೂ ಸುದೀಪ್ ಚಂದ್ರ ಶೆಟ್ಟಿ ನೇಗದ್ದೆ, ಮದ್ದಳೆ ವಾದಕರಾಗಿ ಶಶಿಕುಮಾರ್ ಆಚಾರ್ಯ ತೆಂಕನಿಡಿಯೂರು ಹಾಗೂ ಚಂಡೆ ವಾದಕರಾಗಿ ಸುರೇಶ್ ಆಚಾರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತಂಡದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.