ಮಂಗಳೂರು : ತುಳುಕೂಟ (ರಿ.) ಕುಡ್ಲ ನಡೆಸುವ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ- 2024’ರ ಅಪ್ರಕಟಿತ ಸ್ವತಂತ್ರ ನಾಟಕ ಕೃತಿಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಕೊಡ ಮಾಡುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಯನ್ನು ಕುಡ್ಲದ ತುಳುಕೂಟದ ಮೂಲಕ ಕಳೆದ 17 ವರ್ಷಗಳಿಂದ ಪ್ರದಾನಿಸಲಾಗುತ್ತದೆ.
ಎ-4 ಹಾಳೆಯಲ್ಲಿ 60-70 ಪುಟಗಳಳೊಳಗೆ ಕೃತಿ ಇರಬೇಕು. ಹಾಳೆಯ ಒಂದೇ ಬದಿಯಲ್ಲಿ ಇರಬೇಕು. ನಾಟಕ ಸ್ವತಂತ್ರ ಕೃತಿಯಾಗಿರಬೇಕು. 2025ರ ಮಕರ ಸಂಕ್ರಾಂತಿಯವರೆಗೆ ಪ್ರದರ್ಶನಗೊಳ್ಳಬಾರದು. ಪೌರಾಣಿಕ / ಚಾರಿತ್ರಿಕ / ಸಾಮಾಜಿಕ / ಜಾನಪದ ಹೀಗೆ ಯಾವ ಪ್ರಕಾರವೂ ಆಗುತ್ತದೆ. ಭಾಷಾಂತರಗೊಂಡ / ಆಧಾರಿತ ಕೃತಿಗಳನ್ನು ನಿರಾಕರಿಸಲಾಗುವುದು. ಪ್ರಶಸ್ತಿಯು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ನಗದು ಮೊತ್ತವೂ ಇರುತ್ತದೆ.
ಲೇಖಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಸ್ವತಂತ್ರ ಕೃತಿಯೆಂದು ಸ್ವಯಂಘೋಷಿತ ಪ್ರಮಾಣ ಪತ್ರ ಇರಬೇಕು. ಬೇರೆಲ್ಲೂ ಪ್ರದರ್ಶನಗೊಂಡಿರದ ನಾಟಕ ಆಗಬೇಕು. ಇನ್ನು ಮೂರು ಬಾರಿ ಪ್ರಥಮ ಪ್ರಶಸ್ತಿ ವಿಜೇತರು ಭಾಗವಹಿಸುವಂತಿಲ್ಲ. ಹತ್ತು ಬಾರಿ ಪ್ರಶಸ್ತಿಯನ್ನು ಪಡೆದವರು ಸ್ಪರ್ಧೆಗೆ ಅನರ್ಹರಾಗುತ್ತಾರೆ.
ನಾಟಕ ಕೃತಿಗಳನ್ನು ದಿನಾಂಕ 15 ಜನವರಿ 2025ರೊಳಗೆ ಕಳುಹಿಸಬೇಕು. ‘ಬಿಸುಪರ್ಬ’ದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತುಳು ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ತಿಳಿಸಿದ್ದಾರೆ. ಕೃತಿಗಳನ್ನು ಈ ವಿಳಾಸಕ್ಕೆ ಕಳುಹಿಸಿ. ವರ್ಕಾಡಿ ಶ್ರೀ ರವಿ ಅಲೆವೂರಾಯ, ಸರಯೂ ಮನೆ, ಅಂಚೆ: ಅಶೋಕ ನಗರ, ಕೋಡಿಕಲ್, ಮಂಗಳೂರು-06. 948116353.