ಉಡುಪಿ : ಬೆಂಗಳೂರಿನ ವಿಹಾ ಪ್ರಕಾಶನದಿಂದ ಪ್ರಕಟವಾಗಿದ್ದ ಕಾತ್ಯಾಯಿನಿ ಕುಂಜಿಬೆಟ್ಟು ಇವರ ‘ಏಕತಾರಿ ಸಂಚಾರಿ’ ಎಂಬ ಕವನ ಸಂಕಲನವನ್ನು ಹಿರಿಯ ವಿದ್ವಾಂಸರಾದ ಪ್ರೊ. ಎನ್. ತಿರುಮಲೇಶ್ವರ ಭಟ್ ಇವರು “Tunes of a Single String – Renaissance Poems of Modernist Tradition’ ಎಂಬ ಹೆಸರಲ್ಲಿ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಮಣಿಪಾಲ್ ಯುನಿವರ್ಸಲ್ ಪ್ರೆಸ್ ಬಹಳ ಸುಂದರವಾಗಿ ಪ್ರಕಟಿಸಿದ್ದು, ದಿನಾಂಕ 30 ಸೆಪ್ಟೆಂಬರ್ 2024 ಸೋಮವಾರ ಸಂಜೆ 4-00 ಗಂಟೆಗೆ ‘ವಿಶ್ವ ಅನುವಾದ ದಿನ’ದಂದು ಮಣಿಪಾಲ್ ಯುನಿವರ್ಸಲ್ ಪ್ರೆಸ್ ಇವರು ಉಡುಪಿ ಮಹಾತ್ಮಾ ಗಾಂಧಿ ಕಾಲೇಜಿನ ಸಹಯೋಗದೊಂದಿಗೆ, ಈ ಕೃತಿಯ ಅನಾವರಣ ಕಾರ್ಯಕ್ರಮವನ್ನು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದೆ.
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗಿರುವ ಪ್ರಸಿದ್ಧ ಸಾಹಿತಿಗಳಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಕೃತಿ ಅನಾವರಣಗೊಳಿಸಲಿದ್ದಾರೆ. ಪ್ರತಿಷ್ಠಿತ ಮಾಹೆಯ ಉಪಕುಲಪತಿಗಳಾಗಿರುವ ಡಾ. ಶರತ್ ಕೆ. ರಾವ್ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದ್ದು, ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿರುತ್ತಾರೆ.