ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಪ್ರತಿ ವರ್ಷ ಕೊಡುವ ಸಾಹಿತ್ಯ ಸರಸ್ವತಿ, ಶ್ರೀಮತಿ ಶಾಂತಾದೇವಿ ಕಥಾ ಪ್ರಶಸ್ತಿ ಹಾಗೂ ಡಾ.ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ 2023ನೇ ಸಾಲಿಗೆ ಸಿ. ಎನ್. ಮುಕ್ತಾ ಹಾಗೂ 2024ನೇ ಸಾಲಿಗೆ ಫಾತಿಮಾ ರಲಿಯಾ, 2023ನೇ ಸಾಲಿನ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗೆ ಡಾ.ಎಚ್. ಎಲ್. ಪುಷ್ಪಾ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಸ್ಮಿತಾ ಅಮ್ರತರಾಜ್, 2023ನೇ ಸಾಲಿನ ಸಾಹಿತ್ಯ ಸರಸ್ವತಿ ಪ್ರಶಸ್ತಿಗೆ ಡಾ. ವೈ. ಸಿ. ಭಾನುಮತಿ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಬಿ. ಕೆ. ಶ್ರೀಮತಿ ರಾವ್ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ಇವರು ದತ್ತಿ ದಾನಿಗಳಿಗೆ ಮತ್ತು ಸಾಹಿತ್ಯ ಸರಸ್ವತಿ ಆಯ್ಕೆ ಸಮಿತಿಯ ಸದಸ್ಯರಾದ ಡಾ.ವೀರಣ್ಣ ರಾಜೂರ, ಡಾ.ವೀಣಾ ಶಾಂತೇಶ್ವರ, ಡಾ.ಶಾಂತಾ ಇಮ್ರಾಪೂರ, ಶ್ರೀ ಹ.ವೆಂ.ಕಾಖಂಡಕಿಯವರಿಗೆ ಹಾಗೂ ಕಾವ್ಯ ಪ್ರಶಸ್ತಿಯ ತೀರ್ಪುಗಾರರಾದ ಸವಿತಾ ನಾಗಭೂಷಣ ಮತ್ತು ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ತಿಂಗಳಿನಲ್ಲಿ ನಡೆಯಲಿರುವ ಸಂಘದ ವಾರ್ಷಿಕೋತ್ಸವದಂದು ನಡೆಯಲಿದೆ.