ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ‘ಮಂದಾರ ‘ರಾಮಾಯಣ : ಮಿತ್ತ ಲೋಕದ ಬಿತ್ತೆ’ ಎಂಬ ವಿಷಯದಲ್ಲಿ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 26 ಜೂನ್ 2025 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ. ನಾವೂರು ಮಾತನಾಡಿ ತುಳುವಿನ ಜಾನಪದ ನಂಬಿಕೆ, ‘ಧಾರ್ಮಿಕ ಆಚರಣೆಗಳು, ಕೃಷಿ ಸಂಸ್ಕೃತಿಗಳ ಬದುಕು ಶ್ರೀಮಂತವಾಗಿದ್ದು ಮಂದಾರ ಕೇಶವ ಭಟ್ಟರ ಮಂದಾರ ರಾಮಾಯಣ ಈ ತುಳು ಸಂಸ್ಕೃತಿಯನ್ನು ಹಿಡಿದಿಟ್ಟಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ‘ಮಂದಾರ ‘ರಾಮಾಯಣ : ಮಿತ್ತ ಲೋಕದ ಬಿತ್ತೆ’ ಎಂಬ ವಿಷಯದಲ್ಲಿ ನಡೆದ ವಾಚನ ವ್ಯಾಖ್ಯಾನ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ| ಸೋಮಣ್ಣ ಮಾತನಾಡಿ, ರಾಮಾಯಣ, ಮಹಾಭಾರತಗಳು ಭಾರತದ ಜನಜೀವನವನ್ನು ಆವರಿಸಿದ ಮಹಾಕಾವ್ಯಗಳು. ಸತ್ಯ ಮತ್ತು ಕಲ್ಪನೆಗಳ ಸುಂದರ ಹೆಣಿಗೆಯಾದ ಈ ಕಾವ್ಯಗಳು ದೇಸಿ ಭಾಷೆಗಳಲ್ಲಿ ಮರುಹುಟ್ಟು ಪಡೆದಿದೆ. ಮಂದಾರ ರಾಮಾಯಣದಲ್ಲಿ ತುಳು ಸಂಸ್ಕೃತಿ ಪ್ರಕಟವಾಗಿದೆ ಎಂದರು.
ಸಮಾರಂಭದಲ್ಲಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಡಾ। ನಾಗಪ್ಪ 5 ಗೌಡ, ಡಾ। ಧನಂಜಯ ಕುಂಬ್ಳೆ ಮುಖ್ಯ 2 ಅತಿಥಿಯಾಗಿ ಭಾಗವಹಿಸಿದ್ದರು. ನಿವೃತ್ತ 5 ಪ್ರಾಂಶುಪಾಲ ಸುಭಾಶ್ಚಂದ್ರ ಕಣ್ವತೀರ್ಥ 3 ಕಾವ್ಯವಾಚನ ಮಾಡಿದರು. ಉಪನ್ಯಾಸಕಿ – ಸಂಧ್ಯಾ ಆಳ್ವ ವ್ಯಾಖ್ಯಾನ ಮಾಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ ತುಳುಪೀಠದ ಸಂಯೋಜಕರಾದ ಡಾ| ಮಾಧವ ಎಂ.ಕೆ ಸ್ವಾಗತಿಸಿದರು. ದ್ದ ವಿದ್ಯಾರ್ಥಿನಿ ಪ್ರತೀಕ್ಷಾ ವಂದಿಸಿದರು. 3 ತುಳುಪೀಠದ -, ನಿರೂಪಿಸಿದರು. ಪ್ರಸಾದ್ ಅಂಚನ್
Subscribe to Updates
Get the latest creative news from FooBar about art, design and business.
Previous Articleನಾದಸ್ವರ ವಿದ್ವಾನ್ ಆರ್. ಶ್ರೀರಾಮುಲು ನಿಧನ