ನೆಲಮಂಗಲ : 12ನೇ ಶತಮಾನದ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆಯನ್ನು ವ್ಯಕ್ತಿತ್ವ ವಿಕಸನಕ್ಕಾಗಿ ಬಸವಣ್ಣ ದೇವರಮಠದಲ್ಲಿ ಆಯೋಜನೆ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ವಚನ ಹೇಳಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ನೆಲಮಂಗಲದ ಬಸವಣ್ಣ ದೇವರಮಠದಲ್ಲಿ ದಿನಾಂಕ 19 ಏಪ್ರಿಲ್ 2026ರಂದು ಭಾನುವಾರ ಅಂತಾರಾಜ್ಯ ವಚನ ಕಂಠಪಾಠ ಸ್ಪರ್ಧೆಯನ್ನು ಬಸವ ಜಯಂತಿ ಪ್ರಯುಕ್ತ ಸತತ 3ನೇ ಬಾರಿಗೆ ಆಯೋಜಿಸಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ವಚನ ಹೇಳಿದ ಪ್ರಥಮ ಸ್ಥಾನಕ್ಕೆ ರೂ.ಒಂದು ಲಕ್ಷ, ದ್ವಿತೀಯ ಸ್ಥಾನಕ್ಕೆ ರೂ.75 ಸಾವಿರ, ತೃತೀಯ ಸ್ಥಾನಕ್ಕೆ ರೂ.50 ಸಾವಿರ ಹಾಗೂ ಸಮಾಧಾನಕರ ಬಹುಮಾನ ನೀಡಲಿದೆ. ದೇಶ, ವಿದೇಶದ ಕನ್ನಡಿಗರು ಸಹ ಭಾಗವಹಿಸಬಹುದಾಗಿದ್ದು, ವಚನ ಕಂಠಪಾಠ ಸ್ಪರ್ಧೆಗೆ ಬರುವ ಸ್ಪರ್ಧಿಗಳು ಮೊದಲೇ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಅಭಿಲಾಷ್ ಎಂ.ಆರ್ಬ. ಮೊ. 8147395591, ಜ್ಞಾನೇಶ್ ಟಿ. ಮೊ. 9845454536, ಷಣ್ಮುಖಪ್ಪ ಮೊ. 9980496763ಗೆ ಕರೆಮಾಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
