ಮಂಗಳೂರು: ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ) ಮಂಗಳೂರು ಇದರ ಆಶ್ರಯದಲ್ಲಿ ಜನವರಿ ತಿಂಗಳಲ್ಲಿ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ 04 ಜನವರಿ 2025ರಂದು ‘ವಚನ ಸಾಹಿತ್ಯ ಸಮ್ಮೇಳನ’ ಜರಗಲಿದ್ದು, ಆ ಪ್ರಯುಕ್ತ ‘ಸಮೂಹ ವಚನ ನೃತ್ಯ’ ಹಾಗೂ ‘ಸಮೂಹ ವಚನ ಗಾಯನ’ ಸ್ಪರ್ಧೆ ನಡೆಯಲಿದೆ.
25 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ‘ಸಮೂಹ ವಚನ ಗಾಯನ’ ಸ್ಪರ್ಧೆ ನಡೆಯಲಿದ್ದು, ತಂಡದಲ್ಲಿ 6 ಮಂದಿ ಮಹಿಳೆಯರು ಭಾಗವಹಿಸಬಹುದಾಗಿದೆ. ಅದೇ ರೀತಿ 18 ವರ್ಷ ಮೆಲ್ಪಟ್ಟ ಮಹಿಳೆಯರು ಹಾಗೂ ಪುರುಷರಿಗಾಗಿ ‘ಸಮೂಹ ವಚನ ನೃತ್ಯ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದ್ದು, ಕನಿಷ್ಠ 6 ರಿಂದ ಗರಿಷ್ಠ 10 ಮಂದಿ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಎರಡೂ ಸ್ಪರ್ಧೆಗಳಿಗೆ ಮೊದಲು ಬಂದ 20 ತಂಡಗಳಿಗೆ ಆದ್ಯತೆ ನೀಡಲಾಗುವುದು.
ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನದ ಜೊತೆಗೆ ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಹೆಸರು ನೋಂದಾಯಿಸಲು 22 ಡಿಸೆಂಬರ್ 2024 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಲು ವಚನ ಸಾಹಿತ್ಯ ಸಮ್ಮೇಳನದ ಸ್ವಾಗತ ಕಚೇರಿ, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಕಾಂಪ್ಲೆಕ್ಸ್, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್‌ಬೈಲ್, ಮಂಗಳೂರು. ಇ-ಮೇಲ್: [email protected]
ಆಶಾ ಜಯದೇವ್ ಮತ್ತು ಮಣಿ ಶಂಕರ್ ಮೊ. ನಂ. 8618794902, 9844249437 ಇವರನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
Related Posts
Comments are closed.