ತುಮಕೂರು : ಶೈನಾ ಅಧ್ಯಯನ ಸಂಸ್ಥೆ ತುಮಕೂರು ಆಯೋಜಿಸುವ ಶ್ರೀ ಬಿ. ಚನ್ನಪ್ಪಗೌರಮ್ಮ “ವಚನ ಸಾಹಿತ್ಯ ಪ್ರಶಸ್ತಿ”
ಪ್ರದಾನ ಸಮಾರಂಭ ಮತ್ತು ನುಡಿನಮನ ಕಾರ್ಯಕ್ರಮವು ದಿನಾಂಕ 27 ಜುಲೈ 2025ನೇ ಭಾನುವಾರ ಬೆಳಗ್ಗೆ ಘಂಟೆ 10.30ಕ್ಕೆ ತುಮಕೂರು ಮರಳೂರಿನ ಪ್ರಗತಿ ಬಡಾವಣೆಯಲ್ಲಿರುವ ಅಂಕಿತ ಶಾಲೆಯ ಹತ್ತಿರದ ಡಾ. ಬಿ. ಸಿ. ಶೈಲಾನಾಗರಾಜ್ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಶೈನಾ ಸಂಸ್ಥೆ ತುಮಕೂರು ಇದರ ಅಧ್ಯಕ್ಷರಾದ ದೊಂಬರನಹಳ್ಳಿ ನಾಗರಾಜು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ತುಮಕೂರು ನಗರದ ಮಾನ್ಯ ಶಾಸಕರಾದ ಶ್ರೀ ಜಿ. ಬಿ. ಜ್ಯೋತಿಗಣೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷರಾದ ಶ್ರೀ ಮುರುಳಿ ಕೃಷ್ಣಪ್ಪ, ಸಹಕಾರ ಇಲಾಖೆ ತುಮಕೂರಿನ ನಿವೃತ್ತ ಸಹಾಯಕ ನಿಯಂತ್ರಕರಾದ ಶ್ರೀ ಪಿ. ಎನ್. ಶಿವರುದ್ರಪ್ಪ, ಮಹಿಳಾ ಬಸವ ಕೇಂದ್ರ ತುಮಕೂರಿನ ಅಧ್ಯಕ್ಷರಾದ ಶ್ರೀಮತಿ ಕಲ್ಪನಾ ಉಮೇಶ್ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರು, ವಿದ್ವಾಂಸರು ಮತ್ತು ವಚನ ಸಾಹಿತ್ಯ ಚಿಂತಕರಾದ ತುಮಕೂರಿನ ಶ್ರೀ ಕೋ.ರಂ. ಬಸವರಾಜು ಇವರಿಗೆ ಶ್ರೀ ಬಿ. ಚನ್ನಪ್ಪಗೌರಮ್ಮ “ವಚನ ಸಾಹಿತ್ಯ ಪ್ರಶಸ್ತಿ” ಪ್ರದಾನ ನಡೆಯಲಿದ್ದು, ಮೈಸೂರಿನ ಸಾಹಿತಿಗಳು ಮತ್ತು ವಚನ ಸಾಹಿತ್ಯ ಪ್ರವಾಚಕರಾದ ಶ್ರೀ ಎಸ್. ಜಿ. ಶಿವಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತಿಗಳು ಮತ್ತು ಚಿಂತಕರಾದ ಡಾ. ಬಿ. ಸಿ. ಶೈಲಾ ನಾಗರಾಜ್ ನುಡಿನಮನ ಗೈಯ್ಯಲಿದ್ದಾರೆ.