ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚ ‘ಬಸವ ಜಯಂತಿ ಪ್ರಯುಕ್ತ ಸಾದರಪಡಿಸುವ ‘ವಚನ ವೈಭವ’ ರಾಜ್ಯ ಮಟ್ಟದ ವಚನ ಗಾಯನ ಸ್ಪರ್ಧೆ, ಜಿಲ್ಲಾ ಮಟ್ಟದ ವಚನ ‘ವಾಚನ – ವ್ಯಾಖ್ಯಾನ’ ಸ್ಪರ್ಧೆ ಮತ್ತು ಜಿಲ್ಲಾ ಮಟ್ಟದ ವಚನ ‘ಪ್ರಶ್ನೋತ್ತರ’ ಸ್ಪರ್ಧೆಯು ದಿನಾಂಕ 10-05-2024 ಮತ್ತು 11-05-2024ರಂದು ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯ ಮಟ್ಟದ ವಚನ ಗಾಯನ ಸ್ಪರ್ಧೆ – ಶಾಸ್ತ್ರೀಯ ಸಂಗೀತದ ಶೈಲಿಯಲ್ಲಿ
ಸ್ಪರ್ಧೆಯ ನಿಯಮಗಳು / ವಿಶೇಷಗಳು :
* ಸ್ಪರ್ಧಿಯ ವಯಸ್ಸು 12ರಿಂದ 18 ವರ್ಷದ ಒಳಗಿರಬೇಕು.
* ಸ್ಪರ್ಧೆಯ ಯಾವುದೇ ಹಂತದಲ್ಲಿ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ಬರದಿದ್ದಲ್ಲಿ ಅಥವಾ ಅಸಭ್ಯವಾಗಿ ನಡೆದುಕೊಂಡರೆ ಸ್ಪರ್ಧೆಯಿಂದ ಹೊರಗಿಡಲಾಗುವುದು.
* ಪ್ರವೇಶ ಪತ್ರವನ್ನು ವಾಟ್ಸ್ ಆ್ಯಪ್ ಮೂಲಕವೇ ಕಳುಹಿಸಬೇಕು. (9110453540 / 8310279953)
* ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್ ಅಥವಾ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಕಳುಹಿಸಬೇಕು.
* ಪ್ರವೇಶ ಪತ್ರಗಳನ್ನು ದಿನಾಂಕ 01-04-2024ರಿಂದ 20-04-2024ರ ಒಳಗೆ ಮಾತ್ರ ವಾಟ್ಸ್ ಆ್ಯಪ್ ಮೂಲಕವೇ ಕಳುಹಿಸಬೇಕು.
* ಸ್ಪರ್ಧೆಯಲ್ಲಿ ವಚನಗಳನ್ನು ಬಿಟ್ಟು ಬೇರೆ ಯಾವ ಕೃತಿಯನ್ನು ಹಾಡುವಂತಿಲ್ಲ.
* ವಚನಕಾರರ ಹೆಸರು ಮತ್ತು ರಾಗ ತಿಳಿಸಬೇಕು. ತೀರ್ಪುಗಾರರು ವಚನದ ಅರ್ಥದ ಬಗ್ಗೆ ಪ್ರಶ್ನಿಸಿದರೆ ಉತ್ತರಿಸುವಂತಿರಬೇಕು.
* ಸ್ಪರ್ಧೆಯಲ್ಲಿ ಬ್ಯಾಟರಿ ಚಾಲಿತ ಶೃತಿ ಪೆಟ್ಟಿಗೆ ವಿನಹ ಬೇರೆ ಯಾವುದೇ ವಾದ್ಯ ಸಹಕಾರ ಬಳಕೆ ಮಾಡುವಂತಿಲ್ಲ.
* ಎಲ್ಲಾ ಹಂತದಲ್ಲಿ ಸಾಹಿತ್ಯ ನೋಡದೇ ಹಾಡಬೇಕು.
* ಪ್ರವೇಶ ಪತ್ರದಲ್ಲಿ ಕೇಳಿರುವ ವಿವರಗಳು ಸಂಪೂರ್ಣವಾಗಿರಬೇಕು.
* ಸ್ಪರ್ಧಿಗಳು 8 ವಚನಗಳನ್ನು ಕಲಿತಿರಬೇಕು.
* ಪ್ರತಿ ಹಂತದಲ್ಲಿ ತೀರ್ಪುಗಾರರು ಕೇಳಿದ 2 ವಚನಗಳನ್ನು ಹಾಡಬೇಕು.
* ತೀರ್ಪುಗಾರರು ಕೇಳುವ ವಚನಗಳು ಹಾಗೂ ರಾಗ, ತಾಳದ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು.
* ಪ್ರಥಮ ಹಂತದ ನಂತರ ಮುಂದಿನ ಎಲ್ಲಾ ಹಂತಗಳಲ್ಲಿ ವಾದ್ಯ ಸಹಕಾರದೊಂದಿಗೆ ಹಾಡಬೇಕು. ವಾದ್ಯ ಸಹಕಾರವನ್ನು ಸಂಸ್ಥೆಯ ಕಡೆಯಿಂದ ಏರ್ಪಡಿಸುವುದು.
* ಸ್ಪರ್ಧೆಯ ಯಾವುದೇ ಹಂತದಲ್ಲಾದರೂ ಸ್ಪರ್ಧೆಯ ಗುಣಮಟ್ಟ ಉತ್ತಮವಾಗಿಸಲು ಆಯೋಜಕರು/ತೀರ್ಪುಗಾರರು ಕೆಲವು ಬದಲಾವಣೆ ಮಾಡಬಹುದು. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ.
ತೀರ್ಪುಗಾರರ ನಿರ್ಣಯ ಅಂತಿಮವಾದದ್ದು. ಇದನ್ನು ಆಯೋಜಕರೂ ಸೇರಿದಂತೆ ಬೇರೆ ಯಾರೂ ಪ್ರಶ್ನಿಸುವಂತಿಲ್ಲ.
ಪ್ರಥಮ ಬಹುಮಾನ : ರೂ.5,000/-, ದ್ವಿತೀಯ ಬಹುಮಾನ : ರೂ.4,000/- ಮತ್ತು ತೃತೀಯ ಬಹುಮಾನ : ರೂ.3 ,000/-
ಜಿಲ್ಲಾ ಮಟ್ಟದ ವಚನ ‘ವಾಚನ – ವ್ಯಾಖ್ಯಾನ’ ಸ್ಪರ್ಧೆ
ಸ್ಪರ್ಧೆಯ ನಿಯಮಗಳು :
1. ಸ್ಪರ್ಧಿಯು ಯಾವುದಾದರೂ ಎರಡು ವಚನಗಳ ಬಗ್ಗೆ ವ್ಯಾಖ್ಯಾನ (ಭಾಷಣ) ಮಾಡಲು ತಯಾರಿ ಮಾಡಿಕೊಂಡಿರಬೇಕು.
2. 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಶಾಲೆಯಿಂದ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು.
3. ಪ್ರವೇಶ ಪತ್ರದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಸಹಿ ಹಾಗೂ ಶಾಲೆಯ ಮುದ್ರೆ ಕಡ್ಡಾಯವಾಗಿ ಇರಲೇಬೇಕು.
4. ಕಲಿತಿರುವ ಎರಡು ವಚನಗಳಲ್ಲಿ ತೀರ್ಪುಗಾರರು ಕೇಳಿದ ವಚನದ ಬಗ್ಗೆ ವ್ಯಾಖ್ಯಾನ ಮಾಡಬೇಕು.
5. ವ್ಯಾಖ್ಯಾನಕ್ಕೆ ಕಾಲಾವಕಾಶ ಕನಿಷ್ಟ 3 ನಿಮಿಷಗಳು ಹಾಗೂ ಗರಿಷ್ಠ 4 ನಿಮಿಷಗಳು.
6. ಸ್ಪರ್ಧಿಯು ವೇದಿಕೆಗೆ ಬಂದು ನೇರವಾಗಿ ವಚನ ಹೇಳಿ, ವಚನಕಾರರ ಅಂಕಿತನಾಮ ತಿಳಿಸಿ, ಆ ವಚನದಲ್ಲಿ ವಚನಕಾರರು ಏನು ಹೇಳುತ್ತಿರುವರು ಎನ್ನುವ ಹಿನ್ನೆಲೆ ಬಗ್ಗೆ ಮಾತನಾಡಬೇಕು. (ವ್ಯಾಖ್ಯಾನಿಸಬೇಕು)
7. 20 ಸ್ಪರ್ಧಿಗಳಿಗಿಂತ ಕಡಿಮೆ ಪ್ರವೇಶ ಬಂದಲ್ಲಿ ಸ್ಪರ್ಧೆಯನ್ನು ರದ್ದು ಮಾಡಲಾಗುವುದು. ಮೊದಲು ಬಂದ 50 ಸ್ಪರ್ಧಿಗಳಿಗೆ ಮಾತ್ರ ಅವಕಾಶ ದೊರೆಯುವುದು.
8. ಪ್ರವೇಶ ಪತ್ರವನ್ನು ವಾಟ್ಸ್ ಆ್ಯಪ್ ಮೂಲಕವೇ ಕಳುಹಿಸಬೇಕು. (9110453540 / 8310279953)
9. ಪ್ರವೇಶ ಪತ್ರ ಕಳುಹಿಸಲು ಅಂತಿಮ ದಿನಾಂಕ 20-03-2024.
10. ಸ್ಪರ್ಧೆಯ ಗುಣಮಟ್ಟ ಉತ್ತಮವಾಗಿಸಲು ಆಯೋಜಕರು / ತೀರ್ಪುಗಾರರು ಕೆಲವು ಬದಲಾವಣೆ ಮಾಡಬಹುದು. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ತೀರ್ಪುಗಾರರ ನಿರ್ಣಯವೇ ಅಂತಿಮವಾದದ್ದು.
ಪ್ರಥಮ ಬಹುಮಾನ : ರೂ.3,000/-, ದ್ವಿತೀಯ ಬಹುಮಾನ : ರೂ.2,000/- ಮತ್ತು ತೃತೀಯ ಬಹುಮಾನ : ರೂ.1,000/-
ಜಿಲ್ಲಾ ಮಟ್ಟದ ವಚನ ‘ಪ್ರಶ್ನೋತ್ತರ’ ಸ್ಪರ್ಧೆ
ಸ್ಪರ್ಧೆಯ ನಿಯಮಗಳು :
1. 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಶಾಲೆಯಿಂದ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು.
2. 20 ಸ್ಪರ್ಧಿಗಳಿಗಿಂತ ಕಡಿಮೆ ಪ್ರವೇಶ ಪತ್ರ ಬಂದಲ್ಲಿ ಸ್ಪರ್ಧೆಯನ್ನು ರದ್ದು ಮಾಡಲಾಗುವುದು. ಮೊದಲು ಬಂದ 50 ಸ್ಪರ್ಧಿಗಳಿಗೆ ಮಾತ್ರ ಅವಕಾಶ.
3. ಪ್ರವೇಶ ಪತ್ರವನ್ನು ವಾಟ್ಸ್ ಆ್ಯಪ್ ಮೂಲಕವೇ ಕಳುಹಿಸಬೇಕು. (9110453540 / 8310279953)
4 ಪ್ರವೇಶ ಪತ್ರ ಕಳುಹಿಸಲು ಕಡೆಯ ದಿನಾಂಕ 20-03-24
5. ಪ್ರವೇಶ ಪತ್ರದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಸಹಿ ಹಾಗೂ ಮುದ್ರೆ ಕಡ್ಡಾಯವಾಗಿ ಇರಬೇಕು.
ಪ್ರಥಮ ಬಹುಮಾನ : ರೂ.3,000/-, ದ್ವಿತೀಯ ಬಹುಮಾನ : ರೂ.2,000/- ಮತ್ತು ತೃತೀಯ ಬಹುಮಾನ : ರೂ.1,000/-