ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ. ಜಿ. ಎಂ ಕಾಲೇಜು, ಉಡುಪಿ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ 46ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 6,7 ಮತ್ತು 8 ಡಿಸೆಂಬರ್ 2024ರಂದು (ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ) ಉಡುಪಿಯ ಎಂ. ಜಿ. ಎಂ. ಕಾಲೇಜು ಆವರಣದ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ದಿನಾಂಕ 06 ಡಿಸೆಂಬರ್ 2024ರ ಶುಕ್ರವಾರ ಸಾಯಂಕಾಲ ಘಂಟೆ 4.00ಕ್ಕೆ ಎಂ. ಜಿ. ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಟಿ. ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಟಿ. ರಂಗ ಪೈ ಉದ್ಘಾಟಿಸಲಿರುವರು ಸಭಾಕಾರ್ಯಕ್ರಮದ ಬಳಿಕ ವಿಶ್ರಾಂತ ಪ್ರಾಚಾರ್ಯರಾದ ಡಾ. ಅನಿಲ್ ಕುಮಾರ್ ಶೆಟ್ಟಿ ಅವರಿಂದ ಉಪನ್ಯಾಸ ಹಾಗೂ ಕರ್ನಾಟಕ ಕಲಾಶ್ರೀ ತಿರುಮಲೈ ಶ್ರೀನಿವಾಸ, ಬೆಂಗಳೂರು ಹಾಗೂ ಬಳಗದವರಿಂದ ಸಂಗೀತ ಕಚೇರಿ ನಡೆಯಲಿದೆ.
ದಿನಾಂಕ 07 ಡಿಸೆಂಬರ್ 2024ರ ಶನಿವಾರದಂದು ಬೆಳಿಗ್ಗೆ ಘಂಟೆ 09.30ರಿಂದ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಮತ್ತು ಬಳಗದವರಿಂದ ಕಾವ್ಯವಾಚನ ಬಳಿಕ ಸಂಗೀತ ಕಚೇರಿ. ಮಧ್ಯಾಹ್ನ ಘಂಟೆ 1.30ರಿಂದ ವಾದಿರಾಜ ಕನಕದಾಸ ಕೀರ್ತನಾ ಸ್ಪರ್ಧೆ, ಸಂಜೆ ಶ್ರೀ ಪೊಳಲಿ ಜಗದೀಶ ದಾಸರು ಮತ್ತು ಬಳಗದವರಿಂದ ಹರಿಕಥಾ ಕಾಲಕ್ಷೇಪ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 08 ಡಿಸೆಂಬರ್ 2024ರ ಭಾನುವಾರದಂದು ವಾದಿರಾಜ ಕನಕದಾಸ ಕೀರ್ತನ ಶಿಬಿರದ ಸಮಾರೋಪ ಹಾಗೂ ಕನಕ ಕೀರ್ತನೆ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಂಜೆ ಶ್ರೀ ಮಂಜುನಾಥ ಭಟ್ ಮತ್ತು ಬಳಗದವರಿಂದ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳುವುದು.