ಮಂಗಳೂರು : ದ.ಕ. ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ದಿನಾಂಕ 05-11-2023ರಂದು ಬೆಳಗ್ಗೆ 10.30ಕ್ಕೆ ನಗರದ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ‘ವಾದ್ಯ ಕಲಾ ಮೇಳ’ ಆಯೋಜಿಸಲಾಗಿದೆ. ಬೆಳಿಗ್ಗೆ 8.30ಕ್ಕೆ ಮಂಗಳ ಕ್ರೀಡಾಂಗಣದಿಂದ ಸಂಭ್ರಮದ ಮೆರವಣಿಗೆಯಲ್ಲಿ ಕಹಳೆ, ವಾದ್ಯಮೇಳ, ಡೋಲು, ಕೀಳು ಕುದುರೆ, ತಾಲೀಮು, ಕಂಗೀಲು, ಹುಲಿಕುಣಿತ, ಬ್ಯಾಂಡ್ ಸೆಟ್, ಚೆಂಡೆ ವಾದನ, ಆಕರ್ಷಕ ಮೆರವಣಿಗೆ, ತಾಸೆ ಮತ್ತು ಡೋಲುಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ.
ವಿಧಾನಸಭೆ ಸಭಾಪತಿ ಶ್ರಿ ಯು.ಟಿ. ಖಾದರ್ ಮತ್ತು ಶ್ರೀ ಕ್ಷೇತ್ರ ಕಚ್ಚೂರಿನ ಧರ್ಮದರ್ಶಿ ಶ್ರೀ ಗೋಕುಲ್ ದಾಸ್ ಬಾರ್ಕೂರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರೆ, ಚಲನಚಿತ್ರ ನಿರ್ದೇಶಕ ಶ್ರೀ ರಾಜ್ ಬಿ. ಶೆಟ್ಟಿ ವಾದ್ಯ ಕಲಾ ಮೇಳ ಉದ್ಘಾಟಿಸಲಿದ್ದಾರೆ. ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಶುಭಹಾರೈಸಲಿದ್ದಾರೆ. ದ.ಕ. ಜಿಲ್ಲಾ ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ಶಾಸಕ ಶ್ರೀ ಡಿ. ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ. ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಇನಾಯತ್ ಅಲಿ, ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು, ವಾದ್ಯಕಲಾ ಮೇಳದ ಗೌರವಾಧ್ಯಕ್ಷ ಶ್ರೀ ಗಿರಿಧರ್ ಶೆಟ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನ ಸಂಚಾಲಕ ಎಂ. ದೇವದಾಸ್, ಪ್ರಮುಖರಾದ ಮಿಥುನ್ ರೈ, ಶ್ರೀ ಮಣಿಕಾಂತ್ ಕದ್ರಿ, ಕ್ಯಾಪ್ಟನ್ ಬೃಜೇಶ್ ಚೌಟ, ಶ್ರೀ ವಿಜಯ್ ಕುಮಾರ್ ಕೊಡಿಯಾಲಬೈಲ್, ಶ್ರೀ ಭರತ್ ಕುಮಾರ್, ನಮ್ಮ ಕುಡ್ಲದ ವ್ಯವಸ್ಥಾಪಕರಾದ ಶ್ರೀ ಲೀಲಾಕ್ಷ ಕರ್ಕೇರ ಭಾಗವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು, ಹಿರಿಯ ವಾದ್ಯ ಕಲಾವಿದರನ್ನು ಸಮ್ಮಾನಿಸಲಾಗುವುದು. ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಶ್ರೀ ರಾಜೇಶ್ ನಾಯ್ಕ್ ಯು., ಶ್ರೀ ಹರೀಶ್ ಪೂಂಜಾ, ಶ್ರೀ ಉಮಾನಾಥ ಕೋಟ್ಯಾನ್, ಉದ್ಯಮಿ ಶ್ರೀ ಅಗರಿ ರಾಘವೇಂದ್ರ, ತುಳು ನಟ ಡಾ. ದೇವದಾಸ್ ಕಾಪಿಕಾಡ್ ಭಾಗವಹಿಸಲಿದ್ದಾರೆ. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದಿಂದ ‘ಗೀತಾ ಸಾಹಿತ್ಯ ಸಂಭ್ರಮ’, ಕಾವೂರಿನ ಶ್ರೀ ಗುರು ವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಕಚ್ಚೂರು ಮಾಲ್ದಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಮತ್ತು ಪ್ರತಿಭಾನ್ವಿತ ಯುವ ಕಲಾವಿದರಿಂದ ಕೊಳಲು ವಾದನ, ಸಾಕ್ಸೊಫೋನ್ ವಾದನ, ವಾದ್ಯಗೋಷ್ಠಿ ಮತ್ತು ಜಾನಪದ ನೃತ್ಯ ಸಿಂಚನ ಜರಗಲಿದೆ.
ವಾದ್ಯ ಕಲಾ ಮೇಳದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.