06 ಫೆಬ್ರವರಿ 2023, ಮಂಗಳೂರು: ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಶತಮಾನವನ್ನು ಕಂಡ ಒಂದು ಹಿರಿಯ ಸಂಸ್ಥೆ. ಇದರ ಶತಮಾನೋತ್ಸವ ದ ಪ್ರಯುಕ್ತ ತಾಳಮದ್ದಳೆ – ಸಂಸ್ಮರಣೆ – ಸಂಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸರಣಿ ಯಕ್ಷಗಾನ ಕಾರ್ಯಕ್ರಮವು 13.03.2022ರಿಂದ ಆರಂಭಗೊಂಡು ಇತ್ತೀಚೆಗೆ ಸಂಪನ್ನಗೊಂಡಿತು.
ಯಕ್ಷಗಾನ ಕಲೆಯ ಬಗ್ಗೆ ಹೇಳುವುದೆಂದರೆ ಕರಟದಿಂದ ಕಡಲ ಜಲವ ಅಳೆದಂತೆ – ಬಿ. ಸುರೇಶ್ ಬಾಳಿಗ.
ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸರಣಿ ಕಾರ್ಯಕ್ರಮದಲ್ಲಿ ಸಾಹಿತಿ, ಉದ್ಯಮಿ ಸುರೇಶ ಬಾಳಿಗರು ಮೇಲಿನಂತೆ ನುಡಿದರು. ಯಕ್ಷಗಾನ ಕಲೆಯು ಸಂಗೀತ, ಸಾಹಿತ್ಯ, ನಾಟ್ಯ ಮೂರನ್ನೂ ಒಳಗೊಂಡ ಏಕೈಕ ಕಲೆ. ಈ ಕಲೆಯು ಈ ಸಂಘದ ಮೂಲಕ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಕರ್ನಾಟಕ ಅಕಾಡೆಮಿಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಗಟ್ಟಿ ಕೋಟೆಕಾರ್ ಇವರನ್ನು ಸಂಘದ ಉಪಾಧ್ಯಕ್ಷೆ ಶೋಭಾ ಐತಾಳ್ ಅಭಿನಂದಿಸಿದರು.ಯಕ್ಷಗಾನ ಹವ್ಯಾಸಿ ವೇಷಧಾರಿಯಾಗಿ ಕಲಾ ಜೀವನವನ್ನು ಪ್ರಾರಂಭಿಸಿದ ಕೃಷ್ಣಪ್ಪ ಗಟ್ಟಿಯವರು, ಮುಂದೆ ಯಕ್ಷ ಗುರುವಾಗಿ, ಸಂಘಟಕರಾಗಿ, ಯಕ್ಷಗಾನ ಸ್ಮರಣಿಕೆಗಳ ತಯಾರಕರಾಗಿ ಪ್ರಸಿದ್ಧರಾದರು. ಇವರ ಕಲಾ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ಟಿಯೂ ಇವರಿಗೆ ಲಭಿಸಿರುವುದು ಇವರ ಕಲಾ ಸೇವೆಗೊಂದು ಸಂದ ಗೌರವ ಎಂದರು.
ಸಂಮಾನಕ್ಕೆ ಉತ್ತರವಾಗಿ ಕೃಷ್ಣಪ್ಪ ಗಟ್ಟಿಯವರು ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಂಮಾನ ಪತ್ರವನ್ನು ಪ್ರೀತಮ್ ಭಟ್ ಸೇರಾಜೆ ಪ್ರಸ್ತುತಪಡಿಸಿದರು.
ಕೀರ್ತಿಶೇಷ ಉರ್ವ ಅಂಬು ರವರ ಕಲಾ ಸೇವೆಯನ್ನು ಸ್ಮರಿಸಿ ಅವರಿಗೆ ನುಡಿ ನಮನವನ್ನು, ಕಾರ್ಯಕ್ರಮ ನಿರೂಪಕ, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಸಲ್ಲಿಸಿದರು. ಪ್ರಾಯೋಜಕರಾಗಿ ಸಹಕರಿಸಿದ ಎಲಿಗಂಟ್ ಟೈಲರ್ಸ್, ಮಾಲಕ ವಿವೇಕ್ ಎ. ಸಂಘಕ್ಕೆ ಶುಭ ಹಾರೈಸಿದರು.
ಇನ್ನೋರ್ವ ಅತಿಥಿ ವಿನಾಯಕ ಮಾರ್ಕೆಟಿಂಗ್, ಮಾಲಕ ಉಮಾನಾಥ್, ಯಕ್ಷಗಾನ ಕಲಾವಿದರಿಗೆ ದೇವಿಯ, ಕಲಾ ಮಾತೆಯ ಸಂಪೂರ್ಣ ಅನುಗ್ರಹ ಇರುವುದೇ ಈ ರೀತಿ ಶತಮಾನೋತ್ಸವ ಆಚರಣೆಗೆ ಕಾರಣ.
ಯಕ್ಷಗಾನ ಕಲೆ ಇನ್ನಷ್ಟು ಬೆಳೆಯಲು ಪೋಷಕರು ಮಕ್ಕಳನ್ನೂ ಈ ಕಲೆಯನ್ನು ವೀಕ್ಷಿಸುವಂತೆ ಪ್ರೋತ್ಸಾಹಿಸಬೇಕೆಂದು ಕರೆ ಕೊಟ್ಟರು.
ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ. ಎಸ್. ಭಂಡಾರಿ ಉಪಸ್ಥಿತರಿದ್ದರು.
29 ಜನವರಿ 2023
ಯಕ್ಷಗಾನ ಬಯಲಾಟ ರಾತ್ರಿ ಶಾಲೆ ಇದ್ದಂತೆ -ಜಗದೀಶ್ ಶೆಟ್ಟಿ
ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ ಇತ್ತೀಚಿಗೆ ಶ್ರೀ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ಜರಗಿತು.
ಕರ್ನಾಟಕ ಅಕಾಡೆಮಿಯ ಸಹಯೋಗದಲ್ಲಿ ಬಿ. ರಾಘವದಾಸ್ ಅವರ ಸಂಮಾನ ಕಾರ್ಯಕ್ರಮದಲ್ಲಿ ಇರಾ ಗುತ್ತು ಜಗದೀಶ್ ಶೆಟ್ಟಿ ಮೇಲಿನಂತೆ ನುಡಿದರು.
ಪುರಾಣಗಳನ್ನು ಓದದ ಕರಾವಳಿಯ ಜನತೆ ಇವುಗಳ ಬಗ್ಗೆ ಸಂಪೂರ್ಣ ತಿಳಿವಳಿಕೆಯನ್ನು ಹೊಂದಿರುವುದು ಯಕ್ಷಗಾನದ ಮೂಲಕ ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನ ವೇಷಧಾರಿಯಾಗಿ, ಪ್ರಸಾದನ ಪೂರೈಕೆಗಾರನಾಗಿ, ಕಾರ್ಯಕ್ರಮ ಸಂಯೋಜಕನಾಗಿ ಕಲಾ ಸೇವೆ ಮಾಡುತ್ತಿರುವ ಭಾರತಿ ಕಲಾ ಆರ್ಟ್ಸ್ ನ ರಾಘವದಾಸರನ್ನು ಸಂಚಾಲಕ ಬಿ. ಟಿ. ಕುಲಾಲ್ ಅಭಿನಂದಿಸಿದರು.
ಸಂಮಾನ ಪತ್ರವನ್ನು ಸಂಘಟನಾ ಕಾರ್ಯದರ್ಶಿ ಅಶೋಕ್ ಬೋಳೂರು ವಾಚಿಸಿದರು.ಸಂಮಾನವನ್ನು ಸ್ವೀಕರಿಸಿದ ರಾಘವದಾಸ್ ಬದಲಾಗುತ್ತಿರುವ ಯಕ್ಷಗಾನ ಕಲೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಈ ಸಂಘವು ಹಲವು ಕಾಲ ಸಾರ್ಥಕವಾದ ಕಲಾ ಸೇವೆಯನ್ನು ಮಾಡುವಂತಾಗಲೆಂದು ಹಾರೈಸಿದರು.
ಇತ್ತೀಚಿಗೆ ನಿಧನರಾದ ವೇಷಧಾರಿ, ಪ್ರಸಂಗಕರ್ತ ಕೀರ್ತಿಶೇಷ ಗುರುವಪ್ಪ ಬಾಯಾರು ಇವರಿಗೆ ಸಂಘದ ಪ್ರಧಾನ ಕಾರ್ಯದರ್ಶಿ, ಕಾರ್ಯಕ್ರಮ ನಿರೂಪಕ ಸಂಜಯ ಕುಮಾರ್ ರಾವ್ ನುಡಿ ನಮನ ಸಲ್ಲಿಸಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ. ಎಸ್. ಭಂಡಾರಿ ಅತಿಥಿಗಳ ಪರಿಚಯ ಮಾಡಿದರು.ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಸ್ವಾಗತಿಸಿದರು.
ಪ್ರಾಯೋಜಕರಾಗಿ ರತ್ನಾಕರ ಅಡಪ್ಪ, ಕಲ್ಕಾರು ಸಹಕರಿಸಿದರು.ಸಂಘದ ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್
ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವೀರಮಣಿ ಕಾಳಗ ಯಕ್ಷಗಾನ ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.
22 ಜನವರಿ 2023
ಯಕ್ಷಗಾನ ಕಲಾವಿದರಿಗೆ ಸರಸ್ವತಿಯ ಅನುಗ್ರಹ ಸಂಪೂರ್ಣ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ – ವೈ. ಬಿ. ಸುಂದರ್.
ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮದಲ್ಲಿ ಐಡಿಯಲ್ ಚಿಕನ್ ನ ಜನರಲ್ ಮ್ಯಾನೇಜರ್ ವೈ. ಬಿ. ಸುಂದರ್ ಅಧ್ಯಕ್ಷರಾಗಿ ಮೇಲಿನಂತೆ ನುಡಿದರು.ಕಲಾವಿದ ಪೂರ್ವ ತಯಾರಿಯನ್ನು ಮಾಡಿ ಕಲಾಭಿಮಾನಿಗಳನ್ನು ರಂಜಿಸಬೇಕು ಎಂಬ ಕಿವಿಮಾತನ್ನೂ ಹೇಳಿದರು.
ಶ್ರೀ ಮಹಮ್ಮಾಯಿ ದೇವಸ್ಥಾನದ ಆವರಣದಲ್ಲಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಸರಣಿ ಕಾರ್ಯಕ್ರಮದಲ್ಲಿ ಭಾಗವತ, ಹಿಮ್ಮೇಳ ವಾದಕ, ವೇಷಧಾರಿ ವಿಫ್ನೇಶ್ ಶೆಟ್ಟಿ ಬೋಳೂರು ಇವರನ್ನು ಸಂಮಾನಿಸಲಾಯಿತು.ತನ್ನ ಸಾಧನೆ, ಆಸಕ್ತಿಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸವವ್ಯಸಾಚಿಯಾಗಿ ಮಿಂಚುತ್ತಿರುವ ತನ್ನ ಶಿಷ್ಯನನ್ನು ಅಶೋಕ್ ಬೋಳೂರು ಅಭಿನಂದಿಸಿದರು. ಸಂಮಾನ ಪತ್ರವನ್ನು ಪ್ರೀತಮ್ ಭಟ್ ಸೇರಾಜೆ ವಾಚಿಸಿದರು. ಇತ್ತೀಚೆಗೆ ಕೀರ್ತಿ ಶೇಷರಾದ,ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದಲ್ಲಿ ಹಲವು ವರ್ಷ ಕಲಾ ಸೇವೆಯನ್ನು ಮಾಡಿದ
ದಿಲೀಪ್ ಸುವರ್ಣ, ಸುರತ್ಕಲ್ ಇವರಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ನುಡಿ ನಮನ ಸಲ್ಲಿಸಿದರು.ಇನ್ನೋರ್ವ ಅತಿಥಿ, ಕಾರ್ಯಕ್ರಮದ ಪ್ರಾಯೋಜಕ,ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್, ಇರಾ ಇದರ ಅಧ್ಯಕ್ಷ ಜಯರಾಮ ಪೂಜಾರಿಯವರು ಸಂಮಾನಿಸಲ್ಪಟ್ಟ ವಿಫ್ನೇಶ್ ಈ ಸಂಘದಲ್ಲಿ ಸದಾ ಕಾಲ ಕಲಾ ಸೇವೆಯನ್ನು ಮಾಡುವಂತಾಗಲೆಂದು ಹಾರೈಸಿದರು.ಸಮಿತಿಯ ಅಧ್ಯಕ್ಷ ಸಿ. ಎಸ್. ಭಂಡಾರಿ ಸ್ವಾಗತಿಸಿದರು. ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್, ವಿಶ್ವನಾಥ ಶೆಟ್ಟಿ, ಶಾಲಿನಿ ಶೆಟ್ಟಿ,ವಿನುತಾ ಶೆಟ್ಟಿ ಉಪಸ್ಥಿತರಿದ್ದರು.