ಪುತ್ತೂರು : ವಾಹಿನಿ ಕಲಾಸಂಘ ವತಿಯಿಂದ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಮಧುರಕಾನನ ಗಣಪತಿ ಭಟ್ ನೇತೃತ್ವದಲ್ಲಿ ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರೊ. ವಿ.ಬಿ. ಆರ್ತಿಕಜೆಯವರ ಮಾರ್ಗದರ್ಶನದಲ್ಲಿ ‘ವಾಹಿನಿ ಸಾಹಿತ್ಯ ಸಂಭ್ರಮ 2024’ ದಿನಾಂಕ 11-04-2024ರಂದು ಬೆಳಿಗ್ಗೆ 9.30ಕ್ಕೆ ಪುತ್ತೂರಿನ ದರ್ಬೆ, ಮುಕ್ರಂಪಾಡಿ, ಸುಭದ್ರ ಸಭಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು, ಗಾಯಕರು, ಸಾಹಿತಿ ಮತ್ತು ಕೃಷಿಕರಾದ ಶ್ರೀ ರಾಮಪ್ರಸಾದ್ ಕಾಂಚೋಡು ಇವರ ಅಧ್ಯಕ್ಷತೆಯಲ್ಲಿ ಶ್ರೀ ಚಂದ್ರಶೇಖರ ಏತಡ್ಕ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪುತ್ತೂರಿನ ಹಿರಿಯ ಕವಯತ್ರಿ ಶ್ರೀಮತಿ ಭಾರತಿ ಕೊಲ್ಲರಮಜಲು ಇವರ ‘ಭಾವ ಭಾರತಿ’ ಭಾವಗೀತೆಗಳು, ‘ಮನೋವಾರಿಧಿ’ ಷಡ್ಪದಿಗಳು ಮತ್ತು ‘ಅಂತಃಸತ್ತ್ವ’ ಮುಕ್ತಕಗಳು, ಸಾಹಿತಿ ಶ್ರೀಮತಿ ಸಂಧ್ಯಾ ಕುಮಾರ್ ಉಬರತ್ನ ಇವರ ‘ನೀಳವೇಣಿ ನೀ ನಾಟ್ಯವಾಡು’ ಕಥಾ ಸಂಕಲನ ಮತ್ತು ವಿಶ್ರಾಂತ ಚಿತ್ರ ಕಲಾ ಶಿಕ್ಷಕರು ಮತ್ತು ಕವಿಗಳಾದ ಶ್ರೀ ಬಾಲ ಮಧುರಕಾನನ ಇವರ ‘ವರ್ಣಲೋಕ’ ಎಂಬ ಐದು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ವಿವಿಧ ಕ್ಷೇತ್ರಗಳ 11 ಮಂದಿ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ನಡೆಯಲಿದೆ. ಎಲ್ಲಾ ಸಾಹಿತ್ಯ ಆಸಕ್ತರಿಗೆ ಸಂಘಟಕರು ಸ್ವಾಗತ ಕೋರಿದ್ದಾರೆ.