ಮೈಸೂರು : ಧ್ವನಿ ಫೌಂಡೇಷನ್ ಆಯೋಜಿಸುವ ಡಾ. ಶ್ವೇತಾ ಮಡಪ್ಪಾಡಿ ನೇತೃತ್ವದಲ್ಲಿ ‘ಹಕ್ಕಿಹಾಡು’ ಮಕ್ಕಳ ಬೇಸಿಗೆ ಕಲರವ 2025 ಇದರ ಸಮಾರೋಪ ಸಮಾರಂಭವನ್ನು ದಿನಾಂಕ 27 ಏಪ್ರಿಲ್ 2025ರಂದು ಸಂಜೆ 5-30 ಗಂಟೆಗೆ ಮೈಸೂರಿನ ದಟ್ಟಗಳ್ಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದಿಗ್ವಿಜಯ ಹೆಗ್ಗೋಡು ಇವರ ನಿರ್ದೇಶನದಲ್ಲಿ ‘ಹಕ್ಕಿ ಹಾಡು’ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ. ಮಾನ್ಯ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ನಟಿ ಶ್ರೀಮತಿ ಭವ್ಯ ಮತ್ತು ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ವೆಂಕಟೇಶ್ ಇವರುಗಳು ಭಾಗವಹಿಸಲಿರುವರು.