ಶಿರ್ವ : ಪ್ರದರ್ಶನಾ ಸಂಘಟನಾ ಸಮಿತಿ ಶಿರ್ವ, ಯಕ್ಷಗಾನ ಕಲಾರಂಗ ಉಡುಪಿ ಮತ್ತು ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶಿರ್ವಾದ ಮಹಿಳಾ ಸೌಧದ ಆವರಣದಲ್ಲಿ ದಿನಾಂಕ 07 ಡಿಸೆಂಬರ್ 2025ರಂದು ಕಿಶೋರ ಯಕ್ಷಗಾನ ಸಂಭ್ರಮದ ಪ್ರಯುಕ್ತ ಆರು ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನದ ಸಮಾರೋಪ ಸಮಾರಂಭ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಗ್ರೂಪ್ ಫೋಟೋವನ್ನು ವಿತರಿಸಲಾಯಿತು. ಯಕ್ಷಗಾನದ ಬಗ್ಗೆ ವಿದ್ಯಾರ್ಥಿಗಳಾದ ಹನಿ ಶೆಟ್ಟಿ, ನಮೀಕ್ಷ, ಹರ್ಷಿಣಿ ಭಟ್, ಕೆರಿಯಮ್ಮ ಹಾಗೂ ಉತ್ತರ ಪ್ರದೇಶದ ವಿದ್ಯಾರ್ಥಿನಿ ನಂದಿನಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ವಿ.ಜಿ. ಶೆಟ್ಟಿ, ವೆಂಕಟೇಶ್ ಕಾಮತ್ ಶಿರ್ವ, ವಿಠಲ ಬಿ. ಕಾಂಚನ್, ವಿಷ್ಣುಮೂರ್ತಿ ಸರಳಾಯ, ನಿರಂಜನ ಭಟ್ ಉಪಸ್ಥಿತರಿದ್ದರು. ಪ್ರದರ್ಶನ ಸಂಘಟನಾ ಸಮಿತಿಯ ಅನಂತ ಮೂಡಿತ್ತಾಯ ಸ್ವಾಗತಿಸಿದರು. ಯಕ್ಷಶಿಕ್ಷಣದ ಟ್ರಸ್ಟಿ ನಟರಾಜ ಉಪಾಧ್ಯಾಯ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯ ಪೂರ್ವದಲ್ಲಿ ಸೈಂಟ್ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಮಧುರಾ ಮಹೇಂದ್ರ’, ಸಭೆಯ ಬಳಿಕ ಹಿಂದೂ ಪಿ.ಯು. ಕಾಲೇಜು ಶಿರ್ವ ಇಲ್ಲಿನ ವಿದ್ಯಾರ್ಥಿಗಳಿಂದ ‘ಪ್ರಜ್ಞಾವಿಜಯ’ ಯಕ್ಷಗಾನ ಸೊಗಸಾಗಿ ಪ್ರದರ್ಶಿಸಲ್ಪಟ್ಟಿತು.


