ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸಿದ ‘ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ 2025’ದ ಸಮಾರೋಪ ಸಡಗರ ಕಾರ್ಯಕ್ರಮವು ದಿನಾಂಕ 05 ಮತ್ತು 06 ಮೇ 2025ರಂದು ಸಂಜೆ 5-00 ಗಂಟೆಗೆ ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿದೆ.
ಶಿಬಿರದ ಮಕ್ಕಳಿಂದ ರಂಗಗೀತೆಗಳು, ಕಿರು ನಾಟಕಗಳು, ಕಂಪನಿ ಶೈಲಿಯ ನಾಟಕ, ಮೂಡಲಪಾಯ ಯಕ್ಷಗಾನ, ವೀರಗಾಸೆ, ಕಂಸಾಳೆ, ಮುಳ್ಳು ಕುಣಿತ, ಮಲ್ಲಗಂಬ, ಹಗ್ಗದ ಮಲ್ಲಗಂಬ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.