Subscribe to Updates

    Get the latest creative news from FooBar about art, design and business.

    What's Hot

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಅಷ್ಟಮ ದಿನ ಸಮಾರೋಪ ಸಮಾರಂಭ

    March 9, 2026

    ವಿಜಯಪುರದಲ್ಲಿ ವ್ಯಾಸರಾಯರ ಆರಾಧನೆ ಸಂಗೀತ ಗಮಕೋತ್ಸವ

    March 9, 2026

    ಕೊಂಚಾಡಿ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಳಮದ್ದಳೆ

    March 9, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಅಷ್ಟಮ ದಿನ ಸಮಾರೋಪ ಸಮಾರಂಭ
    Felicitation

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಅಷ್ಟಮ ದಿನ ಸಮಾರೋಪ ಸಮಾರಂಭ

    March 9, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಲೆ ಅಷ್ಟಾಹ ಸಂಭ್ರಮ ‘ಯಕ್ಷಮಂಜರಿ’ಯ ಅಷ್ಟಮ ದಿನದ ಸಮಾರೋಪ ಸಮಾರಂಭವು ದಿನಾಂಕ 08 ಮಾರ್ಚ್ 2026ರಂದು ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದಲ್ಲಿ ನಡೆಯಿತು.

    ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದ ಶ್ರೀ ದತ್ತಾಂಜನೇಯ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು “ಪಾಶ್ಯಾತ್ಯ ದೇಶಗಳಲ್ಲಿ ವರ್ಷದಲ್ಲಿ ಒಂದು ದಿನ ಮಹಿಳಾ ದಿನಾಚರಣೆ ನಡೆಸಿದರೆ ಮಾತೃ ಪ್ರಧಾನವಾದ ನಮ್ಮ ದೇಶದಲ್ಲಿ ಸ್ತ್ರೀಯನ್ನು ದೇವತಾ ಭಾವನೆಯಿಂದ ಪ್ರತಿನಿತ್ಯ ಪೂಜಿಸುತ್ತೇವೆ. ನಮ್ಮ ಸಂಸ್ಕಾರದ ಮೂಲವೇ ತಾಯಿ. ಒಂದು ದೇಶದ ಆಧಾರಸಂಭವೇ ತಾಯಿ. ಸಂಸ್ಕಾರಯುತ ಜೀವನ ನಡೆಸುತ್ತಾ ಸಮಾಜಮುಖಿ ಸೇವೆಯನ್ನು ಮಾಡುತ್ತಾ ಜೀವನ ಸಾರ್ಥಕ್ಯಗೊಳಿಸೋಣ” ಎಂದರು.

    ಕಲಾಪೋಷಕರೂ ಸಾಮಾಜಿಕ ಕಾರ್ಯಕರ್ತರಾದ ಲ. ಆಶಾಪ್ರಭಾಕರ ರಾವ್ ಆರೂರು ಅಧ್ಯಕ್ಷತೆ ವಹಿಸಿದ್ದು, ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರರಾದ ಶ್ರೀ ರಮಾನಂದ ಭಂಡಾರಿ ಶುಭಾಶಯದ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪೂರ್ಣಿಮ ಯತೀಶ್ ರೈ, ಹಿರಿಯ ಕಲಾವಿದರಾದ ಶ್ರೀಮತಿ ಪ್ರಫುಲ್ಲಾ ನಾಯಕ್, ಮಾಜಿ ಕಾರ್ಪೋರೇಟರ್ ಶ್ರೀಮತಿ ರಂಜಿನಿ ಲೋಕೇಶ್ ಕೋಟ್ಯಾನ್ ಉಪಸ್ಥಿತರಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶ್ರೀಮತಿ ಯೋಗಾಕ್ಷಿ ಗಣೀಶ್ ತಳಕಲ ಹಾಗೂ ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ಡಾ. ಸೌಮ್ಯ ಸುಧೀಂದ್ರ ರಾವ್ ಇವರಿಗೆ ಗೌರವ ಸನ್ಮಾನ ಮಾಡಲಾಯಿತು.

    ಹಿರಿಯ ಕಲಾವಿದ ರವಿ ಅಲೆವೂರಾಯ, ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರಾದ ಬಾಲಕೃಷ್ಣ ಕೊಟ್ಟಾರಿ, ಕಾವಿ ಸುಬ್ರಮಣ್ಯ ದೇವಸ್ಥಾನದ, ಪ್ರಭಾಕರ ರೈ, ಪೂರ್ಣಿಮಾ ಪ್ರಭಾಕರ ರಾವ ಪೇಜಾವರ, ಆನಂದ ಶೆಟ್ಟಿ, ಸದಾನಂದ ದೇವಾಡಿಗ, ಪುರುಷೋತ್ತಮ ಪೂಜಾರಿ, ನಾಗೇಶ ಕೋಟ್ಯಾನ್, ಯಕ್ಷ ಸ್ನೇಹ ಕಲಾಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ, ಅಧ್ಯಕ್ಷೆ ಗೀತಾ ಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ ಪಾಟಾಳಿ, ಅರುಣ್ ಕುಮಾರ್, ಗಣೇಶ ಬಿ.ಜಿ., ಯೋಗೀಶ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ, ಆಧ್ಯಾ, ಲಕ್ಷ್ಯಾ, ಕೃತಿ, ಹೃತ್ವಿ, ಲಕ್ಷಾ, ವೃಷಭೇಂದ್ರ, ಲವಿನಾ ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ನಂತರ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಮಹಿಳಾ ಕಲಾವಿದರಿಂದ ‘ಗಿರಿಜಾ ಕಲ್ಯಾಣ’ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

    baikady felicitation roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleವಿಜಯಪುರದಲ್ಲಿ ವ್ಯಾಸರಾಯರ ಆರಾಧನೆ ಸಂಗೀತ ಗಮಕೋತ್ಸವ
    roovari

    Add Comment Cancel Reply


    Related Posts

    ವಿಜಯಪುರದಲ್ಲಿ ವ್ಯಾಸರಾಯರ ಆರಾಧನೆ ಸಂಗೀತ ಗಮಕೋತ್ಸವ

    March 9, 2026

    ಕೊಂಚಾಡಿ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಳಮದ್ದಳೆ

    March 9, 2026

    ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಪ್ರೀತಿಯ ಸಖ್ಯ’ ಎಂಬ ವಿಶೇಷ ಕಾರ್ಯಕ್ರಮ

    March 9, 2026

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಸಪ್ತಮ ದಿನ

    March 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.