Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ‘ಪ್ರೇರಣಾ 5’ ಸಂಗೀತ ಕಛೇರಿ ಮತ್ತು ಭರತನಾಟ್ಯ ಪ್ರದರ್ಶನ | ಫೆಬ್ರವರಿ 28

    February 27, 2026

    ಐವರು ಸಾಹಿತಿಗಳಿಗೆ ಬ್ಯಾರಿವಾರ್ತೆ ಗೌರವ ಪ್ರಶಸ್ತಿ

    February 27, 2026

    ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ‘ನಾಟ್ಯಾಂಜಲಿ ಉತ್ಸವ’

    February 27, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಮಾರೋಪಗೊಂಡ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ”
    Literature

    ಸಮಾರೋಪಗೊಂಡ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ”

    November 1, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕಾರ್ಕಳ : ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಆಯೋಜಿಸಿದ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ” ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 30 ಅಕ್ಟೋಬರ್ 2024ರಂದು ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ನಡೆಯಿತು.
     ಶ್ರೀ ಪ್ರಕಾಶ್ ಬೆಳವಾಡಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ “ವೃತ್ತಿ ಯಾವುದೇ ಇರಲಿ, ವ್ಯಕ್ತಿಯ ಪ್ರವೃತ್ತಿ ತುಂಬ ಮುಖ್ಯ.” ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಹಾಗೂ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ “ಮನಸ್ಸಿನ ಭಾವನೆ, ನೋವು, ನಲಿವು, ವೇದನೆಗಳನ್ನು ಶಬ್ದ ರೂಪದಲ್ಲಿ ಪ್ರಕಟ ಮಾಡುವವರಿಗೆ ಮಾತ್ರ ಸಾಹಿತ್ಯ ಬರೆಯಲು ಸಾಧ್ಯವಾಗುತ್ತದೆ.” ಎಂದರು.
     ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಕಾಶ್ ಬೆಳವಾಡಿ “ಬರಹಗಾರರು ಮಾನವೀಯ ಕಾಳಜಿ, ಕಳಕಳಿಯೊಂದಿಗೆ ಸೂಕ್ಷ್ಮ ಸಂವೇದನಾಶೀಲರಾಗಿ ಸಾಹಿತ್ಯ ರಚಿಸಿ ವರ್ತಮಾನದ ವಾರಸುದಾರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು.” ಎಂದರು. ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಶ್ವತ್ ಎಸ್. ಎಲ್., ಆದರ್ಶ ಎಂ. ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
     ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕೊಡಲಾಯಿತು. ಪುಸ್ತಕ ಮನೆ ಪ್ರಕಾಶನದ ವತಿಯಿಂದ ಎಲ್ಲಾ ಬಗೆಯ ಸಾಹಿತ್ಯ ಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿ, ಹಲವರು ಇದರ ಸದುಪಯೋಗವನ್ನು ಪಡೆದುಕೊಂಡರು.
      ಕಾರ್ಕಳದ ಹಲವಾರು ಶಾಲಾ – ಕಾಲೇಜುಗಳಿಂದ ಒಂದು ಸಾವಿರಕ್ಕಿಂತಲೂ ಮಿಗಿಲಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಹಲವಾರು ಶಾಲಾ-ಕಾಲೇಜುಗಳ ಶಿಕ್ಷಕ, ಉಪನ್ಯಾಸಕ ವರ್ಗದವರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
     ಖ್ಯಾತ ವಾಗ್ಮಿಗಳು ಹಾಗೂ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್. ಕೆ. ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ಶ್ರೀ ಶಿರಡಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಆಶಿಶ್ ಶೆಟ್ಟಿ ವಂದನಾರ್ಪಣೆಗೈದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ‘ಭಾಷಣ ಕಲೆಯ ಕಾರ್ಯಾಗಾರ’ | ನವೆಂಬರ್ 01
    Next Article ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ‘ನೃತ್ಯ ದೀಪೋತ್ಸವ’ | ನವೆಂಬರ್ 2 ಮತ್ತು 3
    roovari

    Add Comment Cancel Reply


    Related Posts

    ಐವರು ಸಾಹಿತಿಗಳಿಗೆ ಬ್ಯಾರಿವಾರ್ತೆ ಗೌರವ ಪ್ರಶಸ್ತಿ

    February 27, 2026

    ಸವಿತಾ ಮಾಧವ ಶಾಸ್ತ್ರಿ ಮಹಿಳಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ

    February 27, 2026

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.