ಉಡುಪಿ : ಯಕ್ಷ ಶಿಕ್ಷಣ ಟ್ರಸ್ಟ್ ‘ಕಿಶೋರ ಯಕ್ಷಗಾನ ಸಂಭ್ರಮ – 2023’ನ್ನು ಈ ವರ್ಷ ಉಡುಪಿ, ಕಾಪು, ಕುಂದಾಪುರ ವಿಧಾನಸಭಾ ವ್ಯಾಪ್ತಿಯ 69 ಶಾಲೆಗಳ 70 ಪ್ರದರ್ಶನಗಳನ್ನು ಜಿಲ್ಲೆಯ ಆರು ಕಡೆಗಳಲ್ಲಿ ಆಯೋಜಿಸಿದ್ದು, ಇದರ ಉದ್ಘಾಟನಾ ಸಮಾರಂಭ ದಿನಾಂಕ 29-11-2023 ರಂದು ಬ್ರಹ್ಮಾವರದ ಬಂಟರ ಭವನದ ಮುಂಭಾಗದಲ್ಲಿ ನಡೆಯಿತು.
ಉಡುಪಿ ಶಾಸಕಹಾಗೂ ಯಕ್ಷಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಡಾ. ಜಿ ಶಂಕರ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಇರ್ಮಾಡಿ ಶ್ರೀ ತಿಮ್ಮಪ್ಪ ಹೆಗ್ಡೆ, ಶ್ರೀ ರಘುರಾಮ ಮಧ್ಯಸ್ಥ, ಶ್ರೀ ಬಿ.ಭುಜಂಗ ಶೆಟ್ಟಿ, ಶ್ರೀ ಬಿ.ಎನ್.ಶಂಕರ ಪೂಜಾರಿ, ಶ್ರೀ ಮಾರಾಳಿ ಪ್ರತಾಪ್ ಹೆಗ್ಡೆ, ಶ್ರೀ ಬಿರ್ತಿ ರಾಜೇಶ್ ಶೆಟ್ಟಿ, ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಧನಂಜಯ ಅಮೀನ್, ಶ್ರೀ ಜ್ಞಾನ ವಸಂತ ಶೆಟ್ಟಿ, ಶ್ರೀ ಎಂ.ಗಂಗಾಧರ ರಾವ್, ಶ್ರೀಮತಿ ಉಮಾ,ಕೇಶವ ಕುಂದರ್, ನಿತ್ಯಾನಂದ ಬಿ.ಆರ್.ಅಭ್ಯಾಗತರಾಗಿ ಭಾಗವಹಿಸಿದರು.
ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ಶ್ರೀ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದು, ಗಣೇಶ್ ಬ್ರಹ್ಮಾವರ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸಚಿನ್ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬ್ರಹ್ಮಾವರ ಎಸ್.ಎಂ.ಎಸ್.ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ಸೈಂಧವವಧೆ’ ಯಕ್ಷಗಾನ ಜರಗಿತು.
ದಿನಾಂಕ 06-12-2023 ರಂದು ಸಂಪನ್ನಗೊಂಡ ಸಮಾರೋಪ ಕಾರ್ಯಕ್ರಮದಲ್ಲಿ ಯಕ್ಷ ಶಿಕ್ಷಣ ಟ್ರಸ್ಟಿನ ಸ್ಥಾಪಕಾಧ್ಯಾಕ್ಷ ಕೆ.ರಘುಪತಿ ಭಟ್ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ “ಯಕ್ಷಗಾನ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸುವುದಕ್ಕೆ ಪೂರಕವಾಗುತ್ತದೆ. ಅವರ ಪೌರಾಣಿಕ ಜ್ಞಾನವನ್ನು ವರ್ಧಿಸುತ್ತದೆ. ಭಾಷಾಶುದ್ಧಿಗೆ ಕಾರಣವಾಗುತ್ತದೆ. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ.” ಎಂದು ಹೇಳಿದರು.
ಸಮಾರಂಭದಲ್ಲಿ ಸುಗ್ಗಿ ಸುಧಾಕರ ಶೆಟ್ಟಿ, ಎಂ.ಗಂಗಾಧರ ರಾವ್, ಎಸ್.ವಿ.ಭಟ್, ಉದಯ ಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಭಾಸ್ಕರ ರೈ, ಚಂದ್ರಶೇಖರ ಶೆಟ್ಟಿ ಮೈರ್ಮಾಡಿ ಸುಧಾಕರ ಶೆಟ್ಟಿ ಹಾಗೂ ವೀಣಾ ವಿ. ನಾಯ್ಕ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಪದಾಧಿಕಾರಿಗಳಾದ ಸುಧೀರ್ ಕುಮಾರ್ ಶೆಟ್ಟಿ, ರಾಜೀವ ಕುಲಾಲ್ ಹಾಗೂ ಸಚಿನ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ವೇಷಭೂಷಣ ಒದಗಿಸಿದ ಪ್ರಸಾಧನ ತಜ್ಞರಾದ ಕೃಷ್ಣಸ್ವಾಮಿ ಜೋಶಿ ಮತ್ತು ಬಾಲಕೃಷ್ಣ ನಾಯಕ್ ಅವರನ್ನು ಗೌರವಿಸಲಾಯಿತು. ಭಾಗವಹಿಸಿದ ಶಾಲೆಗಳ ಮುಖ್ಯಸ್ಥರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ಸಹಯೋಗದಲ್ಲಿ ಒಂದು ವಾರಗಳ ಕಾಲ ನಡೆದ 15 ಪ್ರದರ್ಶನಗಳಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ಸಂಚಿತಾ ಅನುಭವ ಹಂಚಿಕೊಂಡರು. ಯಕ್ಷ ಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಬಿರ್ತಿ ರಾಜೇಶ್ ಶೆಟ್ಟಿ ಸ್ವಾಗತಿಸಿ, ಗಣೇಶ್ ಬ್ರಹ್ಮಾವರ ನಿರೂಪಿಸಿ, ರಾಜೀವ ಕುಲಾಲ್ ವಂದಿಸಿದರು. ನಾರಾಯಣ ಎಂ.ಹೆಗಡೆ ಮತ್ತು ಎಚ್.ಎನ್.ಶೃಂಗೇಶ್ವರ ಸಹಕರಿಸಿದರು.