ಮಂಗಳೂರು : ಡಾ. ದಿನಕರ ಎಸ್ ಪಚ್ಚನಾಡಿ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಹೊತ್ತ ಹರಕೆಯ ಫಲಶ್ರುತಿಗೆ ಹಮ್ಮಿಕೊಂಡ ಪುತ್ರಕಾಮೇಷ್ಠಿ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ ದಿನಾಂಕ 17 ಮೇ 2025ರಂದು ಕುಲಶೇಖರ ಜ್ಯೋತಿನಗರ ಧರ್ಮಶಾಸ್ತ್ರ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕುಲಶೇಖರ ಧರ್ಮಶಾಸ್ತ ಮಂದಿರ ಟ್ರಸ್ಟ್ ಇದರ ಅಧ್ಯಕ್ಷರಾದ ಅಡ್ವಕೇಟ್ ರಾಮ್ ಪ್ರಸಾದ್ ಮಾತನಾಡಿ “ಬಹಳ ಪರಂಪರೆ ಇರುವ ಯಕ್ಷಗಾನವು ಮಾಡಿಸುವವರ ಜೊತೆಗೆ ಭಾಗವಹಿಸುವ ಕಲಾವಿದರ ಭಕ್ತಿ ನಿಷ್ಠೆ ಹಾಗೂ ಹರಕೆ ನಂಬಿಕೆಯ ಆರಾಧನಾ ಕಲೆಯಾಗಿದೆ” ಎಂದರು.
ಮೇ 11ರಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆರಂಭಗೊಂಡ ಈ ತಾಳಮದ್ದಳೆ ಮುಂದುವರಿದು ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ, ಬಜಾಲ್ ಶ್ರೀ ಸತ್ಯನಾರಾಯಣ ಭಜನಾ ಮಂದಿರ, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರ, ಕಾವೂರು ವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನಗಳಲ್ಲಿ ಜರಗಿ ಕುಲಶೇಖರ ಜ್ಯೋತಿನಗರ ಧರ್ಮಶಾಸ್ತ್ರ ಮಂದಿರದ ವೇದಿಕೆಯಲ್ಲಿ ಸಮಾಪನಗೊಂಡಿತು.
ಧರ್ಮಶಾಸ್ತ್ರ ಮಂದಿರದ ಗೌರವ ಅಧ್ಯಕ್ಷರಾದ ಕೂಸಪ್ಪ ಪಾಲ್ದನೆ, ಕುಡುಪು ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ, ಧರ್ಮಶಾಸ್ತ್ರ ಸೇವಾ ಸಮಿತಿಯ ಅಧ್ಯಕ್ಷರಾದ ರಮೇಶ್ ಮೂಡುಶೆಡ್ಡೆ, ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.
ಮಂದಿರದ ಗುರುಸ್ವಾಮಿ ಸತೀಶ್, ಮಾತೃ ಮಂಡಳಿಯ ಅಧ್ಯಕ್ಷೆಯಾದ ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಶಶಿಕಲಾ ರೋಹಿತ್, ರಾಮ ಅಮೀನ್ ಪಚ್ಚನಾಡಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಪ್ತಾಹದ ಅರ್ಥಧಾರಿಗಳಾಗಿ ಭಾಗವಹಿಸಿದ ಶೋಭಾ ವಿಶ್ವನಾಥ್, ತ್ರಿವೇಣಿ ಉದಯ ಪ್ರಕಾಶ್, ಸುಮಿತಾ ವಿಜಯಕುಮಾರ್, ಬಬಿತಾ ದಿನಕರ್, ಶೀಲಾಕ್ಷಿ ತಾರಾನಾಥ್, ಪೂಜಾ, ಚೈತನ್ಯ ಸಾನಿಯಾ ಅವರನ್ನು ಗೌರವಿಸಲಾಯಿತು.
ಧರ್ಮಶಾಸ್ತ್ರ ಮಂದಿರದ ಟ್ರಸ್ಟ್ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಸ್ವಾಗತಿಸಿ, ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವನೆಗೈದು, ಡಾ. ದಿನಕರ್ ಎಸ್. ಪಚ್ಚನಾಡಿ ವಂದಿಸಿದರು.
Subscribe to Updates
Get the latest creative news from FooBar about art, design and business.