ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಹಯೋಗದಲ್ಲಿ ‘ಯಶಸ್ವಿ ಮಹಿಳಾ ಸಮ್ಮಿಳನ’ ಕಾರ್ಯಕ್ರಮ ಸಮಾರೋಪ ಸಮಾರಂಭ ದಿನಾಂಕ 23 ಫೆಬ್ರವರಿ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಆನಂದ ಉರಾಳ್ ಇವರನ್ನು ಗೌರವಿಸಿದ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇದರ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನಾಡಿ “ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಂಘಟನೆಗಳಲ್ಲಿ ಇತ್ತೀಚೆಗೆ ಮಹಿಳೆಯರದೇ ಮೇಲುಗೈ. ಮಹಿಳೆಯರು ಸಂಪೂರ್ಣವಾಗಿ ತೊಡಗಿಸಿಕೊಂಡು ಯಶಸ್ಸುಗೊಳಿಸುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ತಾಯಂದಿರು ಸಮಾಜದ ಶಕ್ತಿ. ಮಹಿಳೆಯರು ತಾನು ಕಲಿಯುವುದರ ಮೂಲಕ ತನ್ನ ಮಕ್ಕಳಿಗೂ ಕಲಿಸಿ ಭವಿಷ್ಯದ ರೂವಾರಿಗಳಾಗುತ್ತಾರೆ. ಮುಂದಿನ ಪೀಳಿಗೆಗೆ ಕಲೆಯನ್ನು ಪಸರಿಸುವ ಕಾರ್ಯ ಮಹಿಳೆಯರಿಂದ ಯಶಸ್ಸು ಕಾಣುವುದಕ್ಕೆ ಸಾಧ್ಯ” ಎಂದರು. ಸಮಾರಂಭದಲ್ಲಿ ಕಲಾ ಪ್ರೋತ್ಸಾಹಕ ಆನಂದ ಉರಾಳ್ ಹಾಗೂ ಯಕ್ಷಗುರು ಸುಧಾ ಮಣೂರು ಇವರಿಗೆ ಗುರುವಂದನೆ ಸಲ್ಲಿಸಲಾಯಿತು.
ಸಅಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಂಜುನಾಥ ಕೆದಲಾಯ ಮಾತನಾಡಿ “ಮಹಿಳೆಯರು ಕಲಾ ವಲಯದಲ್ಲಿ ಕಾಲಿಟ್ಟರೆ ಮನೆಯ ಮಕ್ಕಳು ಕಲಿತಂತೆ. ತನ್ನ ಆಸಕ್ತಿಯನ್ನು ಮಕ್ಕಳಲ್ಲಿ ತೋರಿಸಿ, ತನ್ಮೂಲಕ ಸಮಾಜಕ್ಕೆ ಕೊಡುಗೆಯಾಗುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲಾ ವಿಭಾಗದಲ್ಲಿಯೂ ಮಹಿಳೆಯರು ಸಾಧಕಿಯಾಗಿರುವುದನ್ನು ನಾವು ಗಮನಿಸಿರುತ್ತೇವೆ. ಹೆಣ್ಣು ಅಬಲೆಯಲ್ಲ, ಸಬಲೆ” ಎಂದರು.
ಗುರು ಲಂಬೋದರ ಹೆಗಡೆ ನಿಟ್ಟೂರು, ಶ್ಯಾಮಲಾ ವರ್ಣ, ವನಿತಾ ಉಪಾಧ್ಯ, ಶ್ಯಾಮಲಾ ಟೀಚರ್, ಶಾರದಾ ಹೊಳ್ಳ, ಜ್ಯೋತಿ ಕೆದಲಾಯ, ಸಂಗೀತ, ಭಾಗ್ಯಲಕ್ಷ್ಮೀ, ಸುಜಾತ, ಪ್ರಮಿಳಾ, ಪೂರ್ಣಿಮ, ವಾಣಿಶ್ರೀ ಹಾಗೂ ಮಹಿಳಾ ಕಲಾವಿದರು ಉಪಸ್ಥಿತರಿದ್ದರು. ಹಾಡು, ನೃತ್ಯ, ಯಕ್ಷಗಾನ ರಂಗ ಪಸ್ತುತಿಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಯುಗಾದಿ ಕವಿಗೋಷ್ಠಿಗೆ ಸ್ವರಚಿತ ಕವನಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 15
Next Article ಉಡುಪಿಯ ಕ.ಸಾ.ಪ.ದಿಂದ ‘ಸಾಹಿತ್ಯ ಪ್ರೇರಣೆ’ | ಮಾರ್ಚ್ 01