ಕಟಪಾಡಿ : ವನಸುಮ ವೇದಿಕೆ (ರಿ.) ಕಟಪಾಡಿ ಇದರ ವತಿಯಿಂದ ‘ವನಸುಮ ರಂಗೋತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 05 ಮತ್ತು 06 ಏಪ್ರಿಲ್ 2025ರಂದು ಪ್ರತಿದಿನ ಸಂಜೆ 6-30 ಗಂಟೆಗೆ ಕಟಪಾಡಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 05 ಏಪ್ರಿಲ್ 2025ರಂದು ಸುರಭಿ (ರಿ.) ಬೈಂದೂರು ತಂಡದವರಿಂದ ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ಡಾ. ಶಿವರಾಮ ಕಾರಂತ ರಚನೆಯ ‘ಚೋಮನ ದುಡಿ’ ಮತ್ತು ದಿನಾಂಕ 06 ಏಪ್ರಿಲ್ 2025ರಂದು ಭೂಮಿಕಾ (ರಿ.) ಹಾರಾಡಿ ತಂಡದವರಿಂದ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ಶಶಿರಾಜ್ ಕಾವೂರು ರಚನೆಯ ‘ಬರ್ಬರೀಕಾ’ ನಾಟಕ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಾಸುಮ ಕೊಡಗು ವಿರಚಿತ ‘ನಡುರಾತ್ರಿಯ ಸ್ವಾತಂತ್ರ್ಯ ಕವನ ಸಂಕಲನ ಬಿಡುಗಡೆಗೊಳ್ಳಲಿದೆ.