ಉಡುಪಿ : ಶ್ರೀ ಕಾಳಿಕಾಂಬಾ ಭಜನಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಮತ್ತು ಬಾಲ ಸಂಸ್ಕಾರ ಕೇಂದ್ರ ಇವರ ವತಿಯಿಂದ ಮಕರ ಸಂಕ್ರಾಂತಿ ವಿಶೇಷ ಕಾರ್ಯಕ್ರಮವನ್ನು ದಿನಾಂಕ 15 ಜನವರಿ 2026ರಂದು ಉಡುಪಿ ತೆಂಕನಿಡಿಯೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9-30 ಗಂಟೆಗೆ ಶ್ರೀ ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷರಾದ ಟಿ. ಕೃಷ್ಣ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ತೆಂಕನಿಡಿಯೂರು ಶ್ರೀಮತಿ ಸುಗುಣ ಮಹಾಬಲ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಭಕ್ತಿಗೀತೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ, ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ಭಾವಗಾನ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾಷಣ ಸ್ಪರ್ಧೆಯ ವಿಷಯ 21ನೇ ಶತಮಾನದಲ್ಲಿ ವಿಜ್ಞಾನ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ ಸಾಧ್ಯತೆಗಳು ಮತ್ತು ಸವಾಲುಗಳು (4+1 ನಿಮಿಷಗಳು) ಆಗಿದೆ. ಆಸಕ್ತರು ಸ್ಪರ್ಧಾ ದಿನದಂದು ಬೆಳಗ್ಗೆ 9ರಿಂದ 9.30 ಗಂಟೆಯ ಒಳಗೆ ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ನೋಂದಣಿ ಮಾಡಬೇಕು. ಪ್ರತಿ ಸ್ಪರ್ಧೆಗೆ ಒಂದು ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಿಗೆ ಪ್ರತಿ ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡಕ್ಕೆ ಮಾತ್ರ ಅವಕಾಶ. ಚಿತ್ರಕಲಾ ಸ್ಪರ್ಧೆಗೆ ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಮೊಬೈಲ್ ಸಂಖ್ಯೆ 6360428797 ಮತ್ತು 9964024066ನ್ನು ಸಂಪರ್ಕಿಸಬಹುದು.

