ಸುಳ್ಯ : ಶ್ರೀ ಶಾರದಾಂಬ ಸಮೂಹ ಸಮಿತಿ ಸುಳ್ಯ ಇದರ ವತಿಯಿಂದ ಮಕ್ಕಳ ದಸರಾ 2025 ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ದಿನಾಂಕ 03 ಅಕ್ಟೋಬರ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಚೆನ್ನಕೇಶವ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುಳ್ಯ ತಾಲೂಕಿನ ಹಾಗೂ ಗಡಿನಾಡ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿ/ ವಿದ್ಯಾರ್ಥಿನಿ ದೀಪ ಬೆಳಗಿಸುವುದರೊಂದಿಗೆ ಈ ಸ್ಪರ್ಧಾ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಛದ್ಮವೇಷ, ಭಕ್ತಿಗೀತೆ, ಭಾವಗೀತೆ, ಭರತನಾಟ್ಯ, ವಿಜ್ಞಾನ ಮಾಡೆಲ್ ತಯಾರಿಕೆ, ಸಮೂಹ ಜನಪದ ಗೀತೆ, ಸಮೂಹ ಜನಪದ ನೃತ್ಯ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9611355496, 9481178541 ಮತ್ತು 8747820115 ಸಂಖ್ಯೆಯನ್ನು ಸಂಪರ್ಕಿಸಿರಿ.