ಮಂಗಳೂರು : ವಿಧಾನ ಪರಿಷತ್ ಮಾಜಿ ಶಾಸಕರಾದ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ 9ನೇ ವರ್ಷದ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಾಚರಣೆ 2023 ಪ್ರಯುಕ್ತ ‘ಭಾವೈಕ್ಯತೆಯ ಸಂಗಮ’ ದಿನಾಂಕ 12-11-2023ರಂದು ಸಂಜೆ 4 ಗಂಟೆಯಿಂದ ಕದ್ರಿ ಪಾರ್ಕ್‌ನ ಸುವರ್ಣ ಕಲಾಮಂಟಪದ ವಠಾರದಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಕುಣಿತ ಭಜನೆ ಸ್ಪರ್ಧೆ ಮತ್ತು ಗೂಡುದೀಪ ಸ್ಪರ್ಧೆಗಳನ್ನು ಸಾರ್ವಜನಿರಿಗೆ ಆಯೋಜಿಸಲಾಗಿದೆ.
ಕುಣಿತ ಭಜನೆ ಸ್ಪರ್ಧೆಯಲ್ಲಿ ಪ್ರತಿ ತಂಡದಲ್ಲಿ 10 ಜನರಿಗಿಂತ ಮೇಲಿರಬಾರದು. 20 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಚಿತ್ರಕಲಾ ಸ್ಪರ್ಧೆಯಲ್ಲಿ ‘ದೀಪಾವಳಿ ಹಬ್ಬದ ವೈಶಿಷ್ಟತೆಯ ಬಗ್ಗೆ ಕಲ್ಪನೆ’ ವಿಷಯವಾಗಿದ್ದು, ಸ್ಪರ್ಧೆಯಲ್ಲಿ 3 ವರ್ಗಗಳಿವೆ. ಪ್ರಾಥಮಿಕ – 1ರಿಂದ 7ನೇ ತರಗತಿ, ಹೈಸ್ಕೂಲು – 8ರಿಂದ ಪಿಯುಸಿ – 12ನೇ ತರಗತಿಯವರೆಗೆ ಮತ್ತು ಡಿಗ್ರಿ ಪದವಿ ಹಾಗೂ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 45 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಗೂಡುದೀಪ ಸ್ಪರ್ಧೆಯು ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದಲ್ಲಿ ನಡೆಯಲಿದ್ದು, 5.30 ಗಂಟೆಗೆ ಚಾಲನೆ ನೀಡಲಾಗುವುದು.
ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ಮತ್ತು ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು, ನೊಂದಾವಣಿಗಾಗಿ ಸತೀಶ್ ಪೆಂಗಲ್ 9036719916, ಆನಂದ ಸೋನ್ಸ್ 9901184656 ಅವರನ್ನು ಸಂಪರ್ಕಿಸಬಹುದಾಗಿದೆ. ಕೊನೆಯ ದಿನಾಂಕ 10-11-2023ರೊಳಗೆ ಆಸಕ್ತರು ನೋಂದಣಿ ಮಾಡಬಹುದು.