Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ
    Awards

    ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ

    November 25, 2024Updated:January 7, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಂಗಳೂರು ಕ.ಸಾ.ಪ. ವತಿಯಿಂದ ‘69ನೆಯ ಕನ್ನಡ ರಾಜ್ಯೋತ್ಸವ’ ಮತ್ತು ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವು ದಿನಾಂಕ 23 ನವೆಂಬರ್ 2024ರಂದು ನಡೆಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಕನ್ನಡ ರಾಜ್ಯೋತ್ಸವದ ಆಚರಣೆ ನವಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ಆಚರಣೆಗೊಳ್ಳಲಿ, ಕನ್ನಡಿಗರು ತಮ್ಮ ಭಾಷೆಗೆ ಸಮರ್ಪಸಿಕೊಳ್ಳುವ ಕೆಲಸವನ್ನು ಪ್ರತಿನಿತ್ಯವೂ ಮಾಡಲಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ, ಕನ್ನಡಿಗ-ಕರ್ನಾಟಕಕ್ಕೆ ದುಡಿಯುವ ಸಂಸ್ಥೆಯಾಗಿದ್ದು, ನಿರಂತರವಾಗಿ ಕನ್ನಡವನ್ನು ಜಾಗೃತಿಗೊಳಸುತ್ತಿರುವ ಸಂಸ್ಥೆಯಾಗಿದೆ. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಹಲವು ಹಿರಿಯರ ಮಾತೃಭಾಷೆ ಕನ್ನಡವಾಗಿರಲಿಲ್ಲ. ಅಷ್ಟೇ ಅಲ್ಲ ವಿದೇಶದಿಂದ ಬಂದ ಮೊಗ್ಲಿಂಗ್, ಕಿಟಲ್, ಕಬ್ಬನ್ ಮೊದಲಾದವರು ಕನ್ನಡ ನಾಡಿಗೆ ಬಹು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಇದು ನಮಗೆ ಪ್ರೇರಣೆಯಾಗಬೇಕು. ಕನ್ನಡ ಸಾಹಿತ್ಯ ಬಹು ಶ್ರೀಮಂತವಾಗಿದೆ. ನಮ್ಮಲ್ಲಿ ಬೆಳಗನ್ನು ‘ಮೂಡಣ ಮನೆಯ ಮುತ್ತಿನ ನೀರಿನ’ ಎಂದು ಬೇಂದ್ರೆಯವರು ವರ್ಣಿಸಿದರೆ, ‘ರಣ ರಣ ಬಿಸಿಲು’ ಎಂದು ಅಡಿಗರು ಮಧ್ಯಾಹ್ನವನ್ನು ಬಣ್ಣಿಸಿದ್ದಾರೆ, ಕೆ.ಎಸ್.ನಿಸಾರ್ ಅಹಮದ್ ‘ಮತ್ತದೇ ಸಂಜೆ’ ಎಂದು ಹಾಡಿದ್ದಾರೆ. ಕೆ.ಎಸ್. ನರಸಿಂಹ ಸ್ವಾಮಿ ‘ರಾಯರು ಬಂದರು ಮಾವನ ಮನೆಗೆ’ ಎಂದು ರಾತ್ರಿಯ ಸೊಬಗನ್ನು ಹಿಡಿದಿಟ್ಟಿರೆ ರಾಷ್ಟ್ರಕವಿ ಕುವೆಂಪು ‘ಬಾ ಇಲ್ಲಿ ಸಂಭವಿಸು’ ಎಂದು ನಿತ್ಯ ಸತ್ಯವನ್ನು ಹಾಡಿದ್ದಾರೆ. ಇಂತಹ ಶ್ರಿಮಂತಿಕೆಯಿಂದಲೇ ಕನ್ನಡ ಸಾಹಿತ್ಯ ಎಂಟು ಜ್ಞಾನಪೀಠಗಳನ್ನು ಪಡೆದು ದೇಶದ ಗಮನ ಸೆಳೆದಿದೆ. ಈ ಹೆಮ್ಮೆಯನ್ನು ಬಿತ್ತರಿಸಲು ರಾಜ್ಯೋತ್ಸವ ಪ್ರೇರಣೆಯಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳು ಇಲ್ಲಿ ಸ್ಥಾಪಿತವಾಗಿದ್ದು, ಯಾವುದೇ ಅರ್ಜಿ-ಮರ್ಜಿ ಇಲ್ಲದೆ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ” ಎಂದು ಹೇಳಿದರು

    ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಮಾಡಿದ ವಿಶ್ರಾಂತ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ಇವರು ಮಾತನಾಡಿ “ನಾಡೋಜ ಡಾ. ಮಹೇಶ ಜೋಶಿಯವರು ಹೊರನಾಡಿನ ಮಾತ್ರವಲ್ಲದೆ ವಿದೇಶಿ ಕನ್ನಡಿಗರನ್ನೂ ಕನ್ನಡ ಸಾಹಿತ್ಯ ಪರಿಷತ್ತಿನ ಬಿತ್ತಿಯೊಳಗೆ ತರುತ್ತಿರುವುದರ ಕುರಿತು ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳು ರಾಜ್ಯ-ಜಿಲ್ಲಾ-ತಾಲೂಕು ಮಟ್ಟಗಳಲ್ಲಿಯೂ ಸಾಧಕರನ್ನು ಗುರುತಿಸಿ ಮಹತ್ವದ ಪರಂಪರೆಯನ್ನು ರೂಪಿಸಿದೆ” ಎಂದು ಪ್ರಶಂಸಿಸಿದರು.

    ‘ಕನ್ನಡ ರಾಜ್ಯೋತ್ಸವ’ದ ವಿಶೇಷ ಉಪನ್ಯಾಸವನ್ನು ನೀಡಿದ ಭಾರತಮಿತ್ರ ಸಮ್ಮಾನಿತಿರು, “ಇತಿಹಾಸ, ಶಾಸನ ಹಾಗೂ ಭಾರತೀಯ ಕಲಾತಜ್ಞ ಡಾ. ವಸುಂಧರಾ ಕವಲಿ ಫಿಲಿಯೋಜಾ ಇವರು ಕರ್ನಾಟಕದ ಪರಂಪರೆ ವಿಜಯನಗರದ ಸಾಮ್ರಾಜ್ಯದಿಂದ ಆರಂಭವಾಗುತ್ತದೆ. ಅದು ಕನ್ನಡಿಗರ ಹಿರಿಮೆಯನ್ನು ಎತ್ತಿ ಹಿಡಿದಿತ್ತು. ಅದರ ಪತನದ ನಂತರ ಬ್ರಿಟೀಷರು ಕಾಲದಲ್ಲಿ ಕನ್ನಡ ನಾಡು ಹರಿದು ಹಂಚಿಹೋಗಿ ಏಕೀಕರಣಕ್ಕಾಗಿ ಮತ್ತು ನಂತರ ಕರ್ನಾಟಕದ ನಾಮಕರಣಕ್ಕಾಗಿ ಚಳುವಳಿ ನಡೆಯಬೇಕಾಯಿತು” ಎಂದು ಅನೇಕ ಚಾರಿತ್ರಿಕ ದಾಖಲೆಗಳ ಮೂಲಕ ವಿದ್ವತ್ ಪೂರ್ಣವಾಗಿ ವಿವರಿಸಿದರು.

    ಇದೇ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡರು ಸ್ಥಾಪಿಸಿರುವ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ಯನ್ನು 2023ನೆಯ ಸಾಲಿಗೆ ಬೆಂಗಳೂರಿನ ಕನ್ನಡ ಹೋರಾಟಗಾರ ಗೋ. ಮೂರ್ತಿ ಯಾದವ್, ತುಮಕೂರಿನ ರಂಗ ಸಂಘಟಕ ಕೆ. ರೇವಣ್ಣ, ಚಿತ್ರದುರ್ಗ ಮೂಲದ ಬರಹಗಾರ ಡಾ. ಮೀರಸಾಬಿಹಳ್ಳಿ ಶಿವಣ್ಣ ಮತ್ತು 2024ನೆಯ ಸಾಲಿಗೆ ಗೌರಿಬಿದನೂರಿನ ಕನ್ನಡ ಹೋರಾಟಗಾರ ಜಿ. ಬಾಲಾಜಿ, ಉಡುಪಿ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಪ್ರದಾನ ಮಾಡಲಾಯಿತು.

    ಹಿರಿಯ ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಅಭಿಮಾನಿಗಳು ಮತ್ತು ಬಂಧುಗಳು ಸ್ಥಾಪಿಸಿರುವ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ’ ಪ್ರಶಸ್ತಿಯನ್ನು ಕಾಸರಗೋಡಿನ ಹಿರಿಯ ವಿದ್ವಾಂಸ ಪ್ರೊ. ಪಿ. ಶ್ರೀಕೃಷ್ಣ ಭಟ್ ಅವರಿಗೂ ಶೈಲಜಾ ಟಿ.ಎಸ್. ಅವರು ಸ್ಥಾಪಿಸಿರುವ ‘ಶ್ರೀಮತಿ ಟಿ. ಗಿರಿಜಾ ದತ್ತಿ ಪ್ರಶಸ್ತಿ’ಯನ್ನು ಹೆಸರಾಂತ ಅನುವಾದಕರೂ, ಭಾಷಾತಜ್ಞರೂ ಆಗಿರುವ ಡಾ. ವನಮಾಲಾ ವಿಶ್ವಂನಾಥ್ ಅವರಿಗೂ ಪ್ರದಾನ ಮಾಡಲಾಯಿತು.

    ಹೆಸರಾಂತ ಉದ್ಯಮಿಗಳಾದ ಶ್ರೀನಿವಾಸ ಜೋಗಿಯವರು ತಮ್ಮ ಹೆತ್ತವರಾದ ‘ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ’ಯವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಧಾರವಾಡದ ಕಲಾವಿದ, ರಂಗಕರ್ಮಿ ಬಸವರಾಜ ಚನ್ನವೀರಪ್ಪ ಬೆಂಗೇರಿಯವರಿಗೂ ಮತ್ತು ಹಿರಿಯ ಗಾಂಧಿವಾದಿ ನಾರಾಯಣ ಘಟ್ಟ ಅವರು ಸ್ಥಾಪಿಸಿರುವ ‘ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದವಟ್ಟಿನ’ ಪ್ರಶಸ್ತಿಯನ್ನು ಹಿರಿಯ ರಾಜಕಾರಣಿ ಮತ್ತು ಸೇವಾದಳದ ಮುಖಂಡರೂ ಆದ ಹೆಚ್. ಹನುಮಂತಪ್ಪನವರಿಗೂ ಪ್ರದಾನ ಮಾಡಲಾಯಿತು.

    ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿದರೆ, ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟರು ಸ್ವಾಗತಿಸಿ, ಡಾ. ಪದ್ಮಿನಿ ನಾಗರಾಜು ವಂದನಾರ್ಪಣೆಯನ್ನು ಮಾಡಿದರು. ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಕದ್ರಿ ಪಾರ್ಕಿನಲ್ಲಿ ‘ಕಲಾ ಪರ್ಬ’ ಚಿತ್ರ ನೃತ್ಯ ಮೇಳ | ಜನವರಿ 11 ಮತ್ತು 12
    Next Article ಇಂಟಾಕ್ ಮಂಗಳೂರು ‘ವಿಶ್ವ ಪರಂಪರೆಯ ಸಪ್ತಾಹ’ಕ್ಕೆ ಹರಿಕಥಾ ಪ್ರದರ್ಶನದೊಂದಿಗೆ ಚಾಲನೆ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.